ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮಳೆ
ಮಂಗಳೂರು: ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷದ ಮೇ ತಿಂಗಳಿನಲ್ಲಿ ಅಧಿಕ ಮಳೆಯಾಗಿದ್ದು, ಸರಾಸರಿ 54.8 ಮಿಲಿಮೀಟರ್ ಸುರಿದಿದೆ. ಕಳೆದ ಬಾರಿ ಇದೇ ಸಮಯಕ್ಕೆ 15.3 ಮಿ.ಮೀ. ಮಳೆಯಾಗಿತ್ತು.
ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲೆಯಲ್ಲಿ ಸರಾಸರಿ 150 ಮಿ.ಮೀ. ಮಳೆಯಾಗಿದೆ. ಸುಳ್ಯದಲ್ಲಿ 240 ಮಿ.ಮೀ. ಅಧಿಕ ಮಳೆ ಸುರಿದಿದೆ. ಬಂಟ್ವಾಳದಲ್ಲಿ 66.5 ಮಿ.ಮೀ. ಅತಿ ಕಡಿಮೆ ಮಳೆಯಾಗಿದೆ. ಪುತ್ತೂರು-172.8 ಮಿ.ಮೀ., ಬೆಳ್ತಂಗಡಿ- 149.4 ಮಿ.ಮೀ., ಮಂಗಳೂರು- 120.7 ಮಿ.ಮೀ. ಮಳೆ ಸುರಿದಿದೆ. ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ 51.6 ಮಿ.ಮೀ ಅಧಿಕ ಮಳೆ ಸುರಿದಿದೆ. ಸುಳ್ಯದಲ್ಲಿ 4.4 ಮಿ.ಮೀ. ಕಡಿಮೆ ಮಳೆಯಾಗಿದೆ.
ಮಳೆಯ ವಿವರ: ಪುತ್ತೂರು- 39.6 ಮಿ.ಮೀ., ಮಂಗಳೂರು- 23.6 ಮಿ.ಮೀ., ಬಂಟ್ವಾಳ- 4.4ಮಿ.ಮೀ.