ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಿತ್ಯ ವಿಜಯೋತ್ಸವ ಮೆರವಣಿಗೆ: ಜನರಿಗೆ ಟ್ರಾಫಿಕ್ ಜಾಮ್ ಕಿರಿಕಿರಿ

Lingaraj Badiger
Updated On : 28 May 2013, 12:11 pm

ಮಂಗಳೂರು: ನಗರದ ಜನತೆ ವಿಜಯೋತ್ಸವ ಎಂದರೆ ಬೆಚ್ಚಿ ಬೀಳುತ್ತಿದ್ದಾರೆ. ಮೇ 8ರಿಂದ ಮಂಗಳೂರಲ್ಲಿ ಸತತ ವಿಜಯೋತ್ಸವಗಳು ನಡೆಯುತ್ತಿದೆ. ಇತ್ತೀಚೆಗೆ ವಿಜಯೋತ್ಸವಗಳಿಂದ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿ ಜನರು ತಲೆ ಚಚ್ಚಿಕೊಳ್ಳುತ್ತಿದ್ದಾರೆ.
 ಶಾಸಕ ಜೆ.ಆರ್. ಲೋಬೊ ವಿಜಯೋತ್ಸವ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದೆ. ನೆಹರು ಮೈದಾನದಿಂದ ಕುಲಶೇಖರ ಚರ್ಚ್‌ವರೆಗೆ ನಡೆದ ಮೆರವಣಿಗೆ ದಿನವಿಡೀ ಜನರು ಸಂಚಾರ ದಟ್ಟಣೆಯಿಂದ ತಲೆಬಿಸಿ ಮಾಡಿಕೊಂಡಿದ್ದರು.
 ಆರೋಗ್ಯ ಸಚಿವ ಖಾದರ್ ವಿಜಯೋತ್ಸವ ದಿನ ಮಧ್ಯಾಹ್ನದಿಂದ ರಾತ್ರಿವರೆಗೂ ಟ್ರಾಫಿಕ್ ಜಾಮ್ ನಿಂದ ಜನ ತತ್ತರಿಸಿದ್ದರು. ಇದೀಗ ಸೋಮವಾರ ಮತ್ತೆ ಶಾಸಕ ಜೆ.ಆರ್.ಲೋಬೊ ವಿಜಯೋತ್ಸವ ಆಚರಣೆಯಿಂದ ಕಂಕನಾಡಿ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಮಂಗಳೂರು ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಪ್ರತಿಭಟನೆ, ಮೆರವಣಿಗೆ ಇದ್ದರೆ ಟ್ರಾಫಿಕ್ ಜಾಮ್ ಆಗುತ್ತದೆ. ಟ್ರಾಫಿಕ್ ಜಾಮ್‌ಗೆ ದೊಡ್ಡ ಕಾರಣ ಬೇಕಿಲ್ಲ. ಆದರೆ ಮಾಡುವ ಸಮಸ್ಯೆ ಮಾತ್ರ ದೊಡ್ಡದು. ಒಮ್ಮೆ ವಿಜಯೋತ್ಸವ ನಿಂತರೆ ಟ್ರಾಫಿಕ್ ಸುಧಾರಣೆಯಾಗಬಹುದು ಎಂದು ಜನ ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement