ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪುನರ್ ಪ್ರತಿಷ್ಠಾಕಲಶ, ನೇಮೋತ್ಸವ

Lingaraj Badiger
Updated On : 28 May 2013, 12:11 pm

ಪುತ್ತೂರು: ಇರ್ದೆ ಬೆಟ್ಟಂಪಾಡಿ ಗ್ರಾಮದ ನಿಡ್ಪಳ್ಳಿ ನೆಲ್ಲಿತ್ತಡ್ಕದಲ್ಲಿ ಮಹಾವಿಷ್ಣುಮೂರ್ತಿ ದೈವದ ಪುನರ್ ಪ್ರತಿಷ್ಠಾಕಲಶ ಮತ್ತು ದೈವಗಳ ನೇಮೋತ್ಸವ ಬುಧವಾರ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಬೆಳಿಗ್ಗೆ ದೈವದ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಕುರಿಂಜ ಪೊನ್ನೆತ್ತಳ್ಕ ಮಹಾವಿಷ್ಣುಮೂರ್ತಿ ಕ್ಷೇತ್ರದಿಂದ ಭಂಡಾರ ತೆಗೆದು ರಾತ್ರಿ ಅನ್ನ ಸಂತರ್ಪಣೆಯ ನಂತರ ಕುಳಿಚ್ಚಾಟ, ಬಳಿಕ ಗುಳಿಗ ಮತ್ತು ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು. ಮೇ 16ರಂದು ಬೆಳಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಬಯಲು ಕೋಲ, ಮಂತ್ರವಾದಿ ಗುಳಿಗನ್ ಕೋಲ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು.

ಎಸ್ಸೆಸ್ಸೆಲ್ಸಿ: ಶೇ.83.5 ಫಲಿತಾಂಶ
ಪುತ್ತೂರು: ಬೆಟ್ಟಂಪಾಡಿಯ ನವೋದಯ ಪ್ರೌಢಶಾಲೆಗೆ ಈ ಬಾರಿಯ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ. 83.5 ಫಲಿತಾಂಶ ಬಂದಿದೆ. ಶಾಲೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ 97 ವಿದ್ಯಾರ್ಥಿಗಳಲ್ಲಿ 81 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಶಾಲೆಯ 5 ವಿದ್ಯಾರ್ಥಿಗಳು  ವಿಶಿಷ್ಠ ಶ್ರೇಣಿ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ನಮಿತಾ ಪಿ. 93.6, ಫಾತಿಮತ್ ನೌಶೀರಾ 92.16, ರೇವತಿ 88.8, ರವಿಶಂಕರ ಡಿ.ಎನ್. 88.48 ಹಾಗೂ ಆಯಿಶತ್ ಷಾಹಿನಾ 87.27 ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡವರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement