ಹಳೆ ಕಾರಿಗೆ ಬೇಡಿಕೆ ಹೆಚ್ಚು
ಮಂಗಳೂರು: ಹೊಸ ಕಾರುಗಳ ಮಾರಾಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ಕಾರುಗಳು ಮಾರಾಟವಾಗುತ್ತಿವೆ. ಮಹೀಂದ್ರ ಪಸ್ಟ್ ಚಾಯ್ಸ್ ಮುಂದಿನ ಮೂರು ವರ್ಷಗಳಲ್ಲಿ 500 ಶಾಖೆಗಳನ್ನು ತೆರೆಯಲಿದೆ ಎಂದು ಪಸ್ಟ್‌ಚಾಯ್ಸ್ ಶೋರೂಮ್ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಯತೀನ್ ಚಡ್ಡಾ ಹೇಳಿದರು.
ಪಡೀಲ್‌ನಲ್ಲಿ ಡೆಸ್ಮಂಡ್ ಮಿರಾಂಡ ಪ್ರವೀಣ್ ಪಿಂಟೊ ಜಂಟಿ ಮಾಲೀಕತ್ವದ ಮಹೀಂದ್ರ ಪಸ್ಟ್‌ಚಾಯ್ಸ್ ಶೋರೂಮ್ ಉದ್ಘಾಟಿಸಿ ಮಾತನಾಡಿದರು. ಮಾರುಕಟ್ಟೆಯಲ್ಲಿ ಸರಾಸರಿ 10 ಹೊಸ ಕಾರು ಮಾರಾಟವಾದರೆ 13 ಹಳೆಕಾರುಗಳು ಮಾರಾಟವಾಗುತ್ತದೆ ಎಂದರು.
ಹಳೆ ಕಾರು ಕೊಳ್ಳುವವನಿಗೆ ಹೊಸ ಕಾರು ಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಎಲ್ಲ ಬ್ರಾಂಡ್‌ಗಳ ಉತ್ತಮ ಸ್ಥಿತಿಯಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಹೀಂದ್ರ ಕಂಪೆನಿ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿ ವ್ಯವಹಾರ ವೃದ್ಧಿ ಮಾಡುತ್ತಿದೆ. ಹೊಸ ಕಾರುಗಳ ಕೊಳ್ಳುವ ಮನೋಸ್ಥಿತಿ ಬದಲಾಗಿದೆ. ಹಿಂದೆಲ್ಲ ಕಾರು ಕೊಂಡ ಬಳಿಕ 10 ವರ್ಷಗಳ ಕಾಲ ಬಳಸುತ್ತಿದ್ದರು. ಕ್ರಮೇಣ ಅದು 5 ವರ್ಷಗಳಿಗೆ ಇಳಿಯಿತು. ಈಗ 2-3 ವರ್ಷಗಳ ಕಾಲ ಮಾತ್ರ ಬಳಸುತ್ತಿದ್ದಾರೆ ಎಂದರು.
ಮೊದಲ ಗ್ರಾಹಕರಿಗೆ ಶಾಸಕ ಜೆ.ಆರ್.ಲೋಬೊ ಕಾರಿನ ಕೀ ಹಸ್ತಾಂತರಿಸಿದರು. ಒಬ್ಬ ಗ್ರಾಹಕ ಅಸಂತುಷ್ಟನಾದರೆ ಆತ ಹತ್ತು ಗ್ರಾಹಕರನ್ನು ತಪ್ಪಿಸುತ್ತಾನೆ. ಆದ್ದರಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿ ಎಂದು ಶಾಸಕ ಲೋಬೊ ಹೇಳಿದರು. ಪ್ರಾಂತೀಯ ಮ್ಯಾನೇಜರ್ ತುಷಾರ್, ಜಿಎಂಸಿಸಿ ಸುನೀಲ್ ಘಾಟೆ, ಎ.ಎಂ.ನರಸಿಂಹಪ್ರಸನ್ನ ಇದ್ದರು. ರೋಶನ್ ಕುವೆಲ್ಲೊ ಕಾರ್ಯಕ್ರಮ ನಿರೂಪಿಸಿದರು.