ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಧಾನಪರಿಷತ್‌ಗೆ ಡಾ.ರಘು ನೇಮಕ ಆಗ್ರಹಿಸಿ ನಿರ್ಣಯ

Lingaraj Badiger
Updated On : 29 May 2013, 12:00 pm

ಉಪ್ಪಿನಂಗಡಿ: ಸತತ 3ನೇ ಬಾರಿ ಸ್ಪರ್ಧಿಸಿ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಿಕಟ ಸ್ಪರ್ಧೆ ನೀಡಿ ಸೋಲನುಭವಿಸಿದ ಡಾ. ರಘು ಅವರ ಪಕ್ಷ ಸೇವೆ ಹಾಗೂ ಜನಸೇವೆ ಪರಿಗಣಿಸಿ, ಅವರನ್ನು ವಿಧಾನಪರಿಷತ್‌ಗೆ ನೇಮಿಸುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಿ ಕಡಬ ಕಾಂಗ್ರೆಸ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಕಡಬ ಅಂಬೇಡ್ಕರ್ ಭವನದಲ್ಲಿ ಕಡಬ ಬ್ಲಾಕ್ ಅಧ್ಯಕ್ಷ ಪಿ.ಪಿ. ವರ್ಗಿಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬಳ್ಳೇರಿ ಮಾತನಾಡಿ, ಡಾ. ರಘು ಗೆಲ್ಲದೆ ಸುಳ್ಯ ಕ್ಷೇತ್ರ ಬಡವಾಯಿತು. ನಿಷ್ಠಾವಂತ ದಕ್ಷ ನಾಯಕ ಡಾ. ರಘು ಅವರನ್ನು ಗೆಲ್ಲಿಸಲು ನಮಗೆ ಸಾಧ್ಯವಾಗಿಲ್ಲ. ಇದೀಗ ಅವರಿಗೆ ಎಂಎಲ್‌ಸಿ ಸ್ಥಾನ ಸಿಗುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕಬೇಕಾಗಿದೆ ಎಂದರು.
ಕಡಬ ಬ್ಲಾಕ್ ಮಹಿಳಾ ಘಟಕ ಅಧ್ಯಕ್ಷೆ ಉಷಾ ಅಂಚನ್, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಎನ್. ಇಸ್ಮಾಯಿಲ್, ಕಾಂಗ್ರೆಸ್ ಮುಖಂಡರಾದ ಸಂಪತ್ ಕುಮಾರ್, ಎಸ್. ಅಬ್ದುಲ್ ಖಾದರ್, ಮರ್ದಾಳ ಮಹಮ್ಮದ್, ಪ್ರವೀಣ್ ಕುಮಾರ್ ಕೆಡೆಂಜಿ, ಮ್ಯಾಥ್ಯೂ ಟಿ.ಎಂ., ಸೆಬಾಸ್ಟಿಯನ್ ಕೆ.ಕೆ., ಯತೀಶ್ ಗೌಡ ಬಾನಡ್ಕ, ಶೀನಪ್ಪ ಗೌಡ ಬೈತಡ್ಕ ವಿಜಯಕುಮಾರ್ ಸೊರಕೆ, ಸತೀಶ್ ಕುಮಾರ್ ಕೆಡೆಂಜಿ, ದಿವಾಕರ ಗೌಡ, ಎಚ್.ಕೆ. ಇಲ್ಯಾಸ್, ರಾಯ್ ಅಬ್ರಹಾಂ ಮಾತನಾಡಿದರು. ಕಡಬ ವಲಯಾಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಸ್ವಾಗತಿಸಿ, ವಂದಿಸಿದರು.
ಕಿಡ್ನಿ ವೈಫಲ್ಯಕ್ಕೀಡಾದ  ವ್ಯಕ್ತಿಗೆ ಆರ್ಥಿಕ ನೆರವು
ಉಪ್ಪಿನಂಗಡಿ: ಆಲಂಕಾರು ಗ್ರಾಮದ ಪಲ್ಲತ್ತಡ್ಕ ನಿವಾಸಿ  ವಾಚ್ ರಿಪೇರಿ ವೃತ್ತಿಯ ಬಾಲಕೃಷ್ಣರ ಎರಡು ಕಿಡ್ನಿಗಳು ವೈಫಲ್ಯಕ್ಕೀಡಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದು ಅವರ ಚಿಕಿತ್ಸಾ ವೆಚ್ಚಕ್ಕೆಂದು ಸಂತ ಜಾರ್ಜ್ ಕುಂತೂರು ಮಲಂಕರ ಚರ್ಚ್‌ನ ಸದಸ್ಯರು ಹಾಗು ಧರ್ಮಗುರುಗಳು ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಪುತ್ತೂರು ಧರ್ಮಪ್ರಾಂತ್ಯದ ಜನರಲ್ ಹಾಗು ಕುಂತೂರು ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರುಗಳು, ಧರ್ಮಕ್ಷೇತ್ರದ ಆಡಳಿತ ಮಂಡಳಿ ಹಾಗು ಸರ್ವ ಸದಸ್ಯರ ಸಹಾಯ ನಿಧಿಯಿಂದ ಸಂಗ್ರಹಿಸಿದ  ನಗದು ಮೊತ್ತವನ್ನು ಚರ್ಚ್‌ನ ವಂದನೀಯ ಫಾದರ್ ಜಾರ್ಜ್ ಕಾಲಾಯಿ ಅವರು ಬಾಲಕೃಷ್ಣ  ದಂಪತಿಗೆ ಸೋಮವಾರ ಚರ್ಚ್‌ನಲ್ಲಿ ಹಸ್ತಾಂತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement