ಐಒಬಿ ಡಿಜಿಎಂ ಆಗಿ ಅನಿಲ್
ಮಂಗಳೂರು: ಇಂಡಿಯನ್ ಓವರ್ಸಿಸ್ ಬ್ಯಾಂಕಿನ ಹಿರಿಯ ರೀಜನಲ್ ಮೆನೇಜರ್ ಕೆ. ಅನಿಲ್ ಅವರು ಡೆಪ್ಯೂಟಿ ಜನರಲ್ ಮೆನೇಜರ್ರಾಗಿ ಭಡ್ತಿಹೊಂದಿದ್ದಾರೆ.
ತುಮಕೂರಿನ ಪೋಲೇನಹಳ್ಳಿಯಲ್ಲಿ 1958ರಲ್ಲಿ ಜನಿಸಿದ ಅನಿಲ್, ಬೆಂಗಳೂರು ಕೃಷಿ ವಿವಿಯಲ್ಲಿ ಎಂಎಫ್ಎಸ್ಸಿ ಪದವಿ ಪಡೆದು ಭಾರತೀಯ ಕೃಷಿ ಸಂಶೋಧನಾ ಕೌನ್ಸಿಲ್ನಿಂದ ಸ್ಕಾಲರ್ಶಿಪ್ ಪಡೆದರು. 1984ರಲ್ಲಿ ಇಂಡಿಯನ್ ಓವರ್ಸಿಸ್ ಬ್ಯಾಂಕಿಗೆ ಕೃಷಿ ಅಧಿಕಾರಿಯಾಗಿ ಸೇರ್ಪಡೆಯಾದರು. ಬೆಂಗಳೂರಿನಲ್ಲಿ ಶಾಖಾ ಮೆನೇಜರ್ ಆಗಿದ್ದಾಗ 3 ಬಾರಿ ಅಖಿಲ ಭಾರತ ಉತ್ತಮ ಮೆಟ್ರೋಪಾಲಿಟನ್ ಶಾಖೆ ಪ್ರಶಸ್ತಿ ಗಳಿಸಿದ್ದರು. ವಿಮಾ ವಹಿವಾಟು ಅಭಿವೃದ್ಧಿ ಕುರಿತಂತೆ ಎಲ್ಐಸಿ ಇಂಡಿಯಾದಿಂದ ಸಿಂಗಾಪುರ, ಮಾರಿಶಸ್ ಮತ್ತು ಇಂಗ್ಲೆಂಡ್ಗೆ ತೆರಳಿದ್ದರು. ಇವರ ನೇತೃತ್ವದಲ್ಲಿ ಈ ಬ್ಯಾಂಕ್ 2 ಬಾರಿ ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಪ್ರಾಂತ್ಯ ಎಂದು ಪ್ರಥಮ ಪ್ರಶಸ್ತಿ ಪಡೆದುಕೊಂಡಿತ್ತು. ಎಲ್ಐಸಿ ವಹಿವಾಟಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಪಡೆದಿದ್ದರು.
ಇದಕ್ಕೂ ಮೊದಲು ಇವರು ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ನಲ್ಲಿ ಸಂಶೋಧನಾ ಎಸೋಸಿಯೇಟ್ ಆಗಿ, ಬೆಂಗಳೂರಿನ ಕೃಷಿ ವಿಜ್ಞಾನ ವಿವಿ ಮತ್ತು ಮೀನುಗಾರಿಕಾ ಇಲಾಖೆಯಲ್ಲಿ ಅಧೀಕ್ಷಕರಾಗಿದ್ದರು.