ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜೂ.15 ರಿಂದ ಆಳ ಸಮುದ್ರ ಯಾತ್ರೀಕೃತ ಮೀನುಗಾರಿಕೆ ನಿಷೇಧ

Lingaraj Badiger
Updated On : 30 May 2013, 11:49 am

ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮೀನುಗಾರರು ಯಾಂತ್ರೀಕೃತ ದೋಣಿ ಮೂಲಕ ಬಲೆ, ಸಾಧನಗಳನ್ನು ಬಳಸಿ ಮೀನು ಹಿಡಿಯುವುದನ್ನು ಜೂ. 15 ರಿಂದ ಆ. 10ರವರೆಗೆ ನಿಷೇಧಿಸಲಾಗಿದೆ. ನಿಷೇಧಿತ ಅವಧಿಯಲ್ಲಿ ಆಳಸಮುದ್ರ ಬಹುದಿನಗಳ ಮೀನುಗಾರಿಕೆ ದೋಣಿಗಳು ಆ. 3 ರಿಂದ ಕರಾವಳಿ ಮೀನುಗಾರಿಕೆಗೆ ತೆರಳಲು ಅನುಮತಿ ನೀಡಲಾಗಿದೆ. ದೋಣಿಗಳು ಹಿಡಿದ ಮೀನನ್ನು ಆ. 10ರ ನಂತರವೇ ಬಂದರುಗಳಿಗೆ ಹಿಂತಿರುಗಬೇಕು ಎಂಬ ನಿಬಂಧನೆಯಿದೆ. ನಿಷೇಧಿತ ಅವಧಿಯಲ್ಲಿ ಕೇವಲ ದೋಣಿಗಳ ಚಲನವಲನಕ್ಕಾಗಿ 10 ಅಶ್ವಶಕ್ತಿ ಔಟ್ಬೋರ್ಡ್ ಎಂಜಿನ್ಗಳನ್ನು ಅಳವಡಿಸಿದ, ಇಲ್ಲದ ನಾಡದೋಣಿಗಳ ಮೂಲಕ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement