ಜೂ.3ರಿಂದ ನೃತ್ಯ ಕಾರ್ಯಾಗಾರ
ಮಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಜೂ. 3 ರಿಂದ 7ರವರೆಗೆ ಮೂಲ್ಕಿ ಪುನರೂರು ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ನೃತ್ಯಾವಧಾನ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗಾಗಿ 080- 22215072 ಸಂಪರ್ಕಿಸಬಹುದು. ನೋಂದಣಿಗೆ ಮೇ 30 ಕೊನೆ ದಿನ.
ಜೂ. 1ರಂದು ತರಬೇತಿ
ಮಂಗಳೂರು: ಯೆಯ್ಯಾಡಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಮಹಿಳಾ ವಿಭಾಗದ ವತಿಯಿಂದ ಜೂ. 1 ರಂದು ಸಂಘದ ಸಭಾಂಗಣದಲ್ಲಿ 'ಸ್ಲಿಂಗ್ ಬ್ಯಾಗ್ ಸ್ಟಿಚ್ಚಿಂಗ್' ತರಬೇತಿ ನಡೆಯಲಿದೆ. ತರಬೇತಿಯು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ತನಕ ನಡೆಯಲಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮಹಿಳಾ ವಿಭಾಗದ ಕಾರ್ಯದರ್ಶಿ ಹರಿಣಾ.ಜೆ.ರಾವ್- 9481916119 ಸಂಪರ್ಕಿಸಬಹುದು.