ಪೊಲೀಸರಿಗೆ ಹಲ್ಲೆ: ಕಾರ್ಪೊರೇಟರ್ ಭೂಗತ
ಮಂಗಳೂರು: ಅಳಕೆ ಮೈದಾನ ಬಳಿ ಪೊಲೀಸರ ಲಾಠಿ, ವಾಕಿಟಾಕಿ ತೆಗೆದುಕೊಂಡು ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಕಾರ್ಪೊರೇಟರ್ ಮತ್ತು ನಾಲ್ವರು ದುಷ್ಕರ್ಮಿಗಳು ಊರಿನಿಂದಲೇ ಪಲಾಯನ ಮಾಡಿದ್ದಾರೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಬಂಧನ ಭೀತಿ ಎದುರಿಸುತ್ತಿರುವ ಕಾರ್ಪೊರೇಟರ್ ಮತ್ತು ನಾಲ್ವರು ಊರು ಬಿಟ್ಟಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಳಕೆಯಲ್ಲಿ ಭಾನುವಾರ ಮಧ್ಯರಾತ್ರಿ ಮದ್ಯ ಸೇವಿಸಿ, ಗಲಾಟೆಯಲ್ಲಿ ತೊಡಗಿದ್ದರಿಂದ ಸ್ಥಳೀಯರು ಕಂಟ್ರೋಲ್ ರೂಮ್ಗೆ ದೂರು ನೀಡಿದ್ದರು. ಅಲ್ಲಿಗೆ ಬಂದಾಗ ಜನಪ್ರತಿನಿಧಿಯೇ ಜನರಿಗೆ ಕಂಟಕ ನೀಡುತ್ತಿರುವುದು ಬೆಳಕಿಗೆ ಬಂದಿತ್ತು. ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು