ಮಗಳ ತಲೆಕೂದಲು ಕತ್ತರಿಸಿದ ಅಪ್ಪ: ದೂರು
ಮಂಗಳೂರು: ಶಾಲೆಗೆ ಹೋಗುವ ಮಧ್ಯೆ ದಾರಿಯಲ್ಲಿ ತನ್ನ ಮಕ್ಕಳ ಕೂದಲನ್ನು ಕತ್ತರಿಸಿ ಹಿಂಸೆ ನೀಡುತ್ತಾನೆ ಎಂದು ಪತಿ ವಿರುದ್ಧ ನೊಂದ ಪತ್ನಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಾಂಡೇಶ್ವರ ನ್ಯೂರೋಡ್ ನಿವಾಸಿ ಶಶಿಕಲಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹತ್ತು ವರ್ಷಗಳ ಹಿಂದೆ ಗಣೇಶ ಮತ್ತು ಶಶಿಕಲಾಗೆ ಮದುವೆಯಾಗಿತ್ತು. ಇಬ್ಬರು ಹೆಣ್ಣುಮಕ್ಕಳು. 5 ವರ್ಷದ ಹಿಂದೊಮ್ಮೆ ಜಗಳವಾಗಿ ಕರಿಮಣಿ ಸರ ಕಿತ್ತುಹಾಕಿದ್ದ. ಇತ್ತೀಚೆಗೆ ಜಗಳಮಾಡಿ ಮನೆ ಬಿಟ್ಟಿರುವ ಗಣೇಶ ಆಗಾಗ್ಗೆ ತನ್ನ ಹೆಣ್ಣುಮಕ್ಕಳು ಶಾಲೆಗೆ ಹೋಗುವಾಗ ದಾರಿ ಮಧ್ಯೆ ಗಲಾಟೆ ಮಾಡುತ್ತಿದ್ದಾನೆ ಮತ್ತು ಹೆಣ್ಣುಮಕ್ಕಳಿಬ್ಬರ ತಲೆಕೂದಲು ಕತ್ತರಿಸಿ ತೊಂದರೆ ಉಂಟು ಮಾಡುತ್ತಿದ್ದಾನೆ ಎಂದು ಶಶಿಕಲಾ ದೂರು ನೀಡಿದ್ದಾರೆ. ಇತ್ತೀಚೆಗೆ ಶಶಿಕಲಾ ಕೆಲಸ ಮಾಡುತ್ತಿರವ ಸ್ಥಳಕ್ಕೆ ಬಂದು ಕೆನ್ನೆಗೆ ಹೊಡೆದು ಹಿಂಸಿಸಿದ್ದು, ಮನೆಯಲ್ಲಿಯೂ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.
--