ಶಾಲೆಗೆ ಹೋಗುವಾಗ ಮಗಳ ತಲೆಕೂದಲು ಕತ್ತರಿಸಿ ಕಿರುಕುಳ
ಮಂಗಳೂರು: ಶಾಲೆಗೆ ಹೋಗುವ ಮಧ್ಯೆ ದಾರಿಯಲ್ಲಿ ತನ್ನ ಮಕ್ಕಳ ಕೂದಲನ್ನು ಕತ್ತರಿಸಿ ಹಿಂಸೆ ನೀಡುತ್ತಾನೆ ಎಂದು ಪತಿ ವಿರುದ್ಧ ನೊಂದ ಪತ್ನಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಾಂಡೇಶ್ವರ ನ್ಯೂರೋಡ್ ನಿವಾಸಿ ಶಶಿಕಲಾ ದೂರು ನೀಡಿದವರು. 10 ವರ್ಷಗಳ ಹಿಂದೆ ಸುಧಾಕರ ಮತ್ತು ಶಶಿಕಲಾಗೆ ಮದುವೆಯಾಗಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾವೆ. '5 ವರ್ಷದ ಹಿಂದೊಮ್ಮೆ ಜಗಳವಾಗಿ ಕರಿಮಣಿ ಸರ ಕಿತ್ತುಹಾಕಿದ್ದ. ಇತ್ತೀಚೆಗೆ ಜಗಳವಾಡಿ ಮನೆ ಬಿಟ್ಟು ಹೋಗಿರುವ ಸುಧಾಕರ್, ಆಗಾಗ್ಗೆ ತನ್ನ ಹೆಣ್ಣುಮಕ್ಕಳು ಶಾಲೆಗೆ ಹೋಗುವಾಗ ದಾರಿ ಮಧ್ಯೆ ಗಲಾಟೆ ಮಾಡುತ್ತಿದ್ದಾನೆ ಮತ್ತು ಹೆಣ್ಣುಮಕ್ಕಳಿಬ್ಬರ ತಲೆಕೂದಲು ಕತ್ತರಿಸಿ ತೊಂದರೆ ನೀಡುತ್ತಿದ್ದಾನೆ' ಎಂದು ಶಶಿಕಲಾ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಇತ್ತೀಚೆಗೆ ಶಶಿಕಲಾ ಕೆಲಸ ಮಾಡುತ್ತಿರವ ಸ್ಥಳಕ್ಕೆ ಬಂದು ಕೆನ್ನೆಗೆ ಹೊಡೆದು ಹಿಂಸಿಸಿದ್ದ ಸುಧಾಕರ್, ಮನೆಯಲ್ಲಿಯೂ ಆಕೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.