ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತಾಲೂಕು ಕಚೇರಿಗೆ ಕಾಂಗ್ರೆಸ್ ಮುಖಂಡರ ದಿಢೀರ್ ಭೇಟಿ

Lingaraj Badiger
Updated On : 31 May 2013, 12:37 pm

ಸುಳ್ಯ: ಸುಳ್ಯ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಕಚೇರಿ ಕೆಲಸಗಳಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ವಿದ್ಯಾರ್ಥಿಗಳಿಂದ ದೂರು ಬಂದ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ತಾಲೂಕು ಕಚೇರಿಗೆ ಭೇಟಿ ಕೊಟ್ಟರು.
ತಹಸೀಲ್ದಾರ್ ಅವರಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದಾಗ ತಹಸೀಲ್ದಾರರು ಅಧಿಕಾರಿಗಳನ್ನು ಕರೆಸಿಕೊಂಡು  ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಚೇರಿ ಕೆಲಸ ನಿರ್ವಹಿಸಲು ಸೂಚಿಸಿದರು.
ಶಾಲೆ ಆರಂಭಗೊಂಡಾಗ ಶಾಲೆಗೆ ಸೇರಲು ಬೇಕಾಗುವ ಜಾತಿ ಮತ್ತು ಆದಾಯ ದಾಖಲಾತಿಗಳನ್ನು ಕೊಡಲು ವಿಳಂಬ ಮಾಡುತ್ತಿರುವವರ ಬಗ್ಗೆ, ತಾಲೂಕು ಕಚೇರಿಗಳಲ್ಲಿ ಮುಖ್ಯವಾಗಿ ದಲ್ಲಾಳಿಗಳ ಹಾವಳಿಗಳನ್ನು ನಿಲ್ಲಿಸುವಂತೆ, ಪಹಣಿಪತ್ರಗಳಲ್ಲಿ ಸಾಲ ನೋಂದಣಿಯಾದುದನ್ನು ತೆಗೆಸಲು ಕೆಲ ಅಧಿಕಾರಿಗಳು ವಿಳಂಬ ಮಾಡಿಕೊಂಡು ಲಂಚಕ್ಕೆ ಕೇಳುವುದು ಮತ್ತು ತಾಲೂಕು ಕಚೇರಿಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಡುವ ವಿಷಯಗಳನ್ನು ಪ್ರಸ್ತಾಪಿಸಲಾಯಿತು. ಸುಧೀರ್ ರೈ ಮೇನಾಲ, ಸತ್ಯಕುಮಾರ್ ಅಡಿಂಜ, ಬೀರಾಮೊದೀನ್, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ಶುಭಕರ ನಾಯಕ್, ಮಹಮ್ಮದ್ ಕುಂಞ ಗೂನಡ್ಕ, ಗಂಗಾಧರ ಮೇನಾಲ, ಲಕ್ಷ್ಮಣ ಶೆಣೈ, ಪುರುಷೋತ್ತಮ ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement