ನೂತನ ರಬ್ಬರ್ ಟ್ಯಾಪಿಂಗ್ ಯಂತ್ರ ಆವಿಷ್ಕಾರ
ಮಂಗಳೂರು: ಕೆಂಜಾರು ಶ್ರೀದೇವಿ ತಾಂತ್ರಿಕ ವಿದ್ಯಾಲಯದ ಮ್ಯೆಕಾನಿಕ್ ತಾಂತ್ರಿಕ ವಿಭಾಗದ 8ನೇ ಸೆಮಿಷ್ಟರ್ ವಿದ್ಯಾರ್ಥಿಗಳು 'ರಬ್ಬರ್ ಟ್ಯಾಪಿಂಗ್ ಯಂತ್ರ'ವನ್ನು ಆವಿಷ್ಕರಿಸಿದ್ದಾರೆ.
ಯಂತ್ರದ ಮೂಲಕ ರಬ್ಬರ್ ಮರದ ತೊಗಟೆಯನ್ನು ಕತ್ತಿಯಿಂದ ತೆಗೆಯುವ ಬದಲು ಇವುಗಳನ್ನು ಬಳಸಬಹುದು. ಇದರಿಂದ ಮರದ ಮೃದುವಾದ ಕಾಂಡವನ್ನು ರಕ್ಷಿಸಬಹುದು ಎಂದು ವಿದ್ಯಾರ್ಥಿಗಳಾದ ದಿಗಂಬರ್ ಡಿ. ಕೊರವಿಕರ್, ಹರೀಶ್ ಕುಮಾರ್, ಎನ್.ಪಿ. ಪ್ರಶಾಂತ್, ಪ್ರವೀಣ್ ಕಮ್ಮಾರ್ ಸಂಶೋಧಿಸಿದ್ದಾರೆ. ಈ ಯೋಜನೆಗೆ ಮ್ಯೆಕಾನಿಕ್ ತಾಂತ್ರಿಕ ವಿಭಾಗದ ಪ್ರಮುಖ ಸುರೇಶ್ ಮುಂಚೆ, ವಿದ್ಯಾಸಾಗರ್ ಶೆಟ್ಟಿ ಮಾರ್ಗದರ್ಶನ ನೀಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಹೇಳಿದ್ದಾರೆ.