ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರೈತರ ಅನುಭವ ಆಧಾರದಲ್ಲಿ ಸಾವಯವ ಪ್ರಯೋಗ

Lingaraj Badiger
Updated On : 31 May 2013, 12:39 pm

ಮಂಗಳೂರು: ರೈತರ ಅನುಭವ ಅಧಾರದಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಸಾವಯವ ಪ್ರಯೋಗ ನಡೆಸಬೇಕು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಎಂ.ಬಿ. ಸದಾಶಿವ ಹೇಳಿದ್ದಾರೆ.
 ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಜಿಲ್ಲೆ 317-ಡಿ ಮತ್ತು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ಕೃಷಿ ವಿಜ್ಞಾನ ಕೇಂದ್ರ ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡ 'ಸಾವಯವ ಕೃಷಿ ಪದ್ಧತಿ' ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಜನತೆಗೆ ಬೇಕಾದ ಉತ್ಪನ್ನವನ್ನು ತಾವೇ ತಯಾರಿಸುವಂತಾಗಬೇಕು.
ಸಾವಯವ ಕೃಷಿಯನ್ನು ಸ್ವಯಂ ಆಗಿ ಪ್ರಯೋಗಕ್ಕೆ ಒಳಪಡಿಸದೆ ರೈತರ ಅನುಭವಗಳನ್ನು ಪಡೆದುಕೊಳ್ಳಬೇಕು.
ಸರ್ಕಾರಿ ಇಲಾಖೆಗಳು ಮಾಡದ ಕೆಲಸವನ್ನು ರೈತರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಾವಯವ ಕೃಷಿಯಲ್ಲಿ ರು. 2.50 ಕೋಟಿ ವಹಿವಾಟು ನಿರೀಕ್ಷಿಸಲಾಗಿದೆ ಎಂದರು.
 ಕಾರ್ಯಾಗಾರ ಉದ್ಘಾಟಿಸಿದ ನಿಸರ್ಗಧಾಮ ನಿರ್ದೇಶಕ ಯು.ಟಿ.ಆಳ್ವ, ಕೃಷಿ ಅಭಿವೃದ್ಧಿಗೆ ರಾಸಾಯನಿಕ ಗೊಬ್ಬರ ಬದಲು ಸಾವಯವ ಉಪಯೋಗಿಸಿ. ಯುವಜನತೆಯನ್ನು ಸಾವಯವ ಕೃಷಿಯತ್ತ ಆಕರ್ಷಿಸಬೇಕು.
ಸರ್ಕಾರವೂ ಈ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದರು.
ವಿಜ್ಞಾನ ಕೇಂದ್ರ ನಿರ್ದೇಶಕ ಡಾ.ಕೆ.ವಿ. ರಾವ್ ಪ್ರಾಸ್ತಾವಿಕ ಮಾತನಾಡಿದರು. ಲಯನ್ಸ್ ರಾಯಭಾರಿ ರೆ. ಎಡ್ವಿನ್ ವಾಲ್ಟರ್ ಸ್ವಾಗತಿಸಿ, ಸಂಯೋಜಕ ಡಾ.ರಾಜಾರಾಮ ರೈ ವಂದಿಸಿದರು.
 ಬಳಿಕ ಈ ಕಾರ್ಯಾಗಾರದಲ್ಲಿ ಸಾವಯವ ಕೃಷಿ ಪದ್ಧತಿ ಮತ್ತು ಕ್ರಿಮಿನಾಶಕ, ತಾರಸಿ ತೋಟ, ಮೀನು ಕೃಷಿ, ಕೃಷಿಗೆ ಸರ್ಕಾರದಿಂದ ನೆರವು, ಸಾವಯವ ನರ್ಸರಿ ಬಗ್ಗೆ ವಿವರ, ಎರೆಹುಳ ಗೊಬ್ಬರ ಪ್ರಾತ್ಯಕ್ಷಿಕೆ ಏರ್ಪಟ್ಟಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement