ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಾನಿ ಬಚಾವೊ ಅಭಿಯಾನಕ್ಕೆ ಗಣ್ಯರ ಸ್ಪಂದನ

Lingaraj Badiger
Updated On : 1 Jun 2013, 12:09 pm

ಮಂಗಳೂರು: ನೀರಿನ ಜಾಗೃತಿಗೆ 92.7 ಬಿಗ್ ಎಫ್‌ಎಂ ರೇಡಿಯೋ 'ಪಾನಿ ಬಚಾವೊ ಅಭಿಯಾನ'ದಲ್ಲಿ ಬಾಡ್ಮಿಂಟನ್ ಕ್ರೀಡಾಪಟು ಸೈನಾ ನೆಹ್ವಾಲ್ ಭಾಗವಹಿಸಿ ಮಾತನಾಡಿದರು.
ಆರ್.ಜೆ. ಎರಾಲ್ ಗೋನ್ಸಾಲ್ವೆಸ್ ನೀಡಿ ಸತತ 15 ಗಂಟೆಗೆಳ ಆರ್.ಜೆ. ಮ್ಯಾರಥಾನ್‌ನಲ್ಲಿ ಹೈದರಾಬಾದ್‌ನಿಂದ ದೂರವಾಣಿಯಲ್ಲಿ ಮಾತನಾಡಿದ ಸೈನಾ, ನೀರು ಬಳಸುವಲ್ಲಿ ಜಾಗ್ರತೆ ವಹಿಸಬೇಕು ಎಂದರು. ಬೆಂಗಳೂರಿಗೆ ಆಗಾಗ ಬರುತ್ತೇನೆ, ಮಂಗಳೂರಿಗೆ ಇನ್ನಷ್ಟೇ ಬರಬೇಕಿದೆ. ದೇವಸ್ಥಾನಗಳ ನಗರಿಯನ್ನು ನೋಡಬೇಕು ಎಂದ ಸೈನಾ, ಮಂಗಳೂರು ಎಂದರೆ ನನಗೆ ಕಣ್ಣಿಗೆ ಕಟ್ಟುವುದು  ವಿಮಾನ ದುರಂತ ವಿಚಾರ ಎಂದರು.
ಬಿಜೈ ಭಾರತ್‌ಮಾಲ್‌ನ ಬಿಗ್‌ಎಫ್‌ಎಂ ರೇಡಿಯೋ ಸ್ಟುಡಿಯೊಗೆ ಭೇಟಿ ನೀಡಿದ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ನಾಯಕ ರಕ್ಷಿತ್ ಶೆಟ್ಟಿ, ನೀರು ಮಿತ ಬಳಕೆ ಬಗ್ಗೆ ಮಾತನಾಡಿದರು. ಪರಿಸರ ಮೇಲೆ ದೌರ್ಜನ್ಯ ನಡೆಸಬೇಡಿ, ಪ್ರಕೃತಿಯನ್ನು ಹಾಳು ಮಾಡಿದರೆ ನಮಗೆ ಕೆಡುಕಾಗುತ್ತದೆ, ಭೂಮಿ ತಾಪಮಾನ ಹೆಚ್ಚಳದಿಂದ ಋತುಮಾನದಲ್ಲಿ ಬದಲಾವಣೆಯಾಗುತ್ತಿದೆ. ಬೆಂಗಳೂರಲ್ಲಿ ಯಾವಾಗ ಮಳೆಗಾಲ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.
ಚಿತ್ರ ನಟಿ ರಿಶಿಕಾ ಸಿಂಗ್, ಹರ್ಷಿಕಾ ಪೂಣಚ್ಚ, ಶ್ವೇತಾ ಪಂಡಿತ್ ದೂರವಾಣಿಯಲ್ಲಿ ಸಂದೇಶ ನೀಡಿದರು. ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರು ರೇಡಿಯೊ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ನೀರಿನ ಹಿತ ಮಿತವಾಗಿ ಬಳಸುವ ಬಗ್ಗೆ ಆರ್.ಜೆ. ಜತೆ ಚರ್ಚೆ ನಡೆಸಿದರು. ಆರ್.ಜೆ.ಎರಾಲ್, ಮಂಗಳೂರು ಸ್ಟೇಶನ್ ಮುಖ್ಯಸ್ಥ  ವಸೀಮ್ ಮೊಹಮ್ಮದ್ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement