ಹಿಂದಿ ಅನುಷ್ಠಾನದಲ್ಲಿ ಕಾರ್ಪ್ ಬ್ಯಾಂಕ್‌ಗೆ ರಾಷ್ಟ್ರೀಯ ಪ್ರಶಸ್ತಿ
ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ ರಾಜಭಾಷೆ ಹಿಂದಿ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದು, ಈ ಬಾರಿ ಕೇಂದ್ರ ಗೃಹ ಮಂತ್ರಾಲಯ ಬ್ಯಾಂಕ್‌ಗೆ “ÁÛdºÛÎæ ವಿಶಿಷ್ಟ ÑÚÈÚáÛ½«é’ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಹಿಂದೆಯೂ ಮೂರು ಬಾರಿ ಇಂದಿರಾಗಾಂಧಿ ರಾಜಭಾಷೆ ಪುರಸ್ಕಾರ ಪಡೆದಿದೆ. ಬ್ಯಾಂಕ್ ತನ್ನ ಕಚೇರಿ ಮತ್ತು ಟಾಲಿಕ್ ಕಚೇರಿಗಳಲ್ಲಿ ರಾಜ ಭಾಷೆ ಹಿಂದಿಗೆ ಮಾನ್ಯತೆ ನೀಡುವುದರ ಜತೆಗೆ ಜನ ಸಾಮಾನ್ಯರನ್ನು ಹಿಂದಿ ಜತೆ ಜೋಡಿಸಲು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಕಾರ್ಪ್ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬ್ಯಾಂಕ್ ವೆಬ್ ಸೈಟ್ ದ್ವಿಭಾಷೆಯಲ್ಲಿದ್ದು, ಹಿಂದಿಯಲ್ಲಿ ಕೆಲಸ ಮಾಡಲು ಆನ್‌ಲೈನ್ ಡಿಕ್ಷನರಿ ಸೌಲಭ್ಯ ಇದೆ. ಸಿಬ್ಬಂದಿಗೆ ಹಿಂದಿ ಪ್ರಶಿಕ್ಷಣ ಕಾರ್ಯಾಗಾರ ಮತ್ತು ಬೆರಳಚ್ಚುಗಾರರಿಗೆ ಯುನಿಕೋಡ್ ಮೂಲಕ ತರಬೇತಿ ನೀಡಲಾಗುತ್ತಿದೆ. ಕ್ಷೇಮ, ಮಂಗಳ, ತ್ರಿಧಾರ ಎಂಬ ಮೂರು ಪತ್ರಿಕೆಗಳನ್ನು ಅಧಿಕಾರಿ, ಸಿಬ್ಬಂದಿಗಾಗಿ ಹಿಂದಿಯಲ್ಲಿ ಪ್ರಕಟಿಸಲಾಗುತ್ತಿದೆ. ಸಹಾಯಕ ಸಾಹಿತ್ಯ ಪ್ರಕಟಣೆಯೂ ನಡೆಯುತ್ತದೆ.
ಬ್ಯಾಂಕ್ ಸಿಬ್ಬಂದಿಗೆ ಹಿಂದಿ ಭಾಷೆಯಲ್ಲಿ ವ್ಯವಹರಿಸುವಂತೆ ಉತ್ತೇಜಿಸಲು ಕಾರ್ಪ್ ಕಾರ್ಯಪಾಲಕ ಪುರಸ್ಕಾರ ಯೋಜನೆ, ಕಾರ್ಪ್ ರಾಜಭಾಷೆ ಪುರಸ್ಕಾರ ಯೋಜನೆ, ಕಾರ್ಪ್ ಸಂಪರ್ಕ ಅಧಿಕಾರಿ ಪುರಸ್ಕಾರ ಯೋಜನೆ ಇತ್ಯಾದಿ ಹಲವು ಯೋಜನೆಗಳಿವೆ. ನಗರ ರಾಜ್ಯಭಾಷೆ ಕಾರ್ಯನ್ವಯ ಸಮಿತಿ ತೆರೆಯಲಾಗಿದೆ.
ಈ ವರ್ಷ ವಿವೇಕ ದರ್ಶನ, ಪದ್ಮಶ್ರೀ ಹರಿಹರನ್ ಸಾಂಸ್ಕೃತಿಕ ಸಂಧ್ಯಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿಂದಿ ಭಾಷೆಯಲ್ಲಿಯೇ ನಡೆಸಲಾಯಿತು. ಬ್ಯಾಂಕ್ 108ನೇ ಸಂಸ್ಥಾಪನೆ ದಿನದಲ್ಲಿ ಹಿಂದಿಯಲ್ಲಿ ಬರೆದ 108 ಪುಟಗಳ “AÁÛ¨Ú«Û’ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಪ್ ಬ್ಯಾಂಕ್ ದಕ್ಷಿಣ ಭಾರತದ ಸರ್ಕಾರಿ ಬ್ಯಾಂಕ್‌ಗಳ ರಾಜಭಾಷೆ ಸಮಿತಿ ಸಂಯೋಜಕರಾಗಿಯೂ ಕೆಲಸ ಮಾಡುತ್ತಿದೆ.
ಕನ್ನಡ ಪ್ರೇಮ: ಕನ್ನಡ ಅನುಷ್ಠಾನಕ್ಕೆ ಗೃಹಪತ್ರಿಕೆ ಕ್ಷೇಮದಲ್ಲಿ ಕನ್ನಡ ವಿಭಾಗ ನಿಯಮಿತವಾಗಿ ಪ್ರಕಟಿಸಲಾಗುತ್ತಿದೆ. ಸಿರಿಗಂಧ ಬಳಗದ ಜತೆ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ನಡೆಸಲಾಗುತ್ತಿದೆ. ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಬ್ಯಾಂಕ್ ಆಯೋಜಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಪ್ರಬಂಧಕ ಪಿ.ಎಸ್. ಬಾಳಿಗ, ಕಾರ್ಯಕಾರಿ ನಿರ್ದೇಶಕ ಬಿ.ಕೆ.ಶ್ರೀವತ್ಸ, ಅಮರ್‌ಲಾಲ್ ದೌಲ್ತಾನಿ ಇದ್ದರು.