ಪ್ರತಿ ತಾಲೂಕಲ್ಲಿ ಜೆನೆರಿಕ್ ಔಷಧ ಕೇಂದ್ರ: ಖಾದರ್
ಮಂಗಳೂರು: ರಾಜ್ಯ ಸರ್ಕಾರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಜನರಿಗೆ ಕಡಿಮೆ ದರದಲ್ಲಿ ಔಷಧ ದೊರಕುವಂತಾಗಲು ಪ್ರತಿ ತಾಲೂಕಿನಲ್ಲಿಯೂ ಜೆನೆರಿಕ್ ಔಷಧ ಕೇಂದ್ರ ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಭಾನುವಾರ ಕಲ್ಲಾಪು ಉರ್ದು ಶಾಲೆಯಲ್ಲಿ ಏರ್ಪಡಿಸಿದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರ, ಕೆಲವು ಮಾತ್ರೆಗಳಿಗೆ ದುಪ್ಪಟ್ಟು ದರವಿರುವ ಕಾರಣ ಅಂಥ ಮಾತ್ರೆಗಳನ್ನು ಜನರಿಗೆ ಶೇ.90 ರಿಯಾಯ್ತಿ ದರದಲ್ಲಿ ನೀಡಲು ಈ ಔಷಧ ಕೇಂದ್ರಗಳು ಸಹಕಾರಿಯಾಗಲಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಯೋಜನೆ ಪ್ರಾರಂಭಿಸಲಾಗುವುದು ಎಂದರು.