ಬೆಂಕಿಗೆ ಪಟಾಕಿ ಅಂಗಡಿ ಢಮಾರ್
ಮಂಗಳೂರು: ಪಟಾಕಿ ಅಂಗಡಿ ಭಸ್ಮವಾದ ಘಟನೆ ಕದ್ರಿಯಲ್ಲಿ ನಡೆದಿದೆ. ಭಾನುವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಅಂಗಡಿಗೆ ಬೆಂಕಿ ಬಿದ್ದು ಅಪಾರ ನಷ್ಟವುಂಟಾಗಿದೆ. ಬೆಂಕಿಗೆ ಅಂಗಡಿಯಲ್ಲಿದ್ದ ಪಟಾಕಿಗಳೆಲ್ಲ ಭಸ್ಮವಾಗಿದ್ದು, ಅಲ್ಲೇ ನಿಲ್ಲಿಸಿದ್ದ ಹೊಂಡಾ ಆಕ್ಟೀವಾ ವಾಹನವೂ ಸುಟ್ಟುಹೋಗಿದೆ. ಅಂಗಡಿಯಲ್ಲಿದ್ದ ಪಟಾಕಿ ಒಮ್ಮೆಲೇ ಸಿಡಿದ ಪರಿಣಾಮ ಕದ್ರಿ ಪರಿಸರದಲ್ಲಿ ಭಯದ ವಾತಾವರಣ ಉಂಟಾಗಿತ್ತು. ಅಂಗಡಿಯೊಂದರಿಂದ ಬೆಂಕಿ ಹತ್ತಿಸಿಕೊಂಡ ರಾಕೆಟ್ ಪಟಾಕಿ ಸಮೀಪದ ಮನೆಗೆ ಹಾರಿ ಹಬ್ಬದ ಸಂಭ್ರಮದಲ್ಲಿದ್ದ ಮನೆಯವರಿಗೆ ಆತಂಕ ಉಂಟು ಮಾಡಿತ್ತು.