ಕನ್ನಡ ವಿದ್ವಾಂಸ ನೆಕ್ರಾಜೆ ಜಗನ್ನಾಥ ಶೆಟ್ಟಿ ನಿಧನ
ಪುತ್ತೂರು: ಕನ್ನಡದ ಹಿರಿಯ ವಿದ್ವಾಂಸ, ನಿವೃತ್ತ ಶಿಕ್ಷಕ ಹಾಗೂ ಹವ್ಯಾಸಿ ಯಕ್ಷಗಾನ ಭಾಗವತ ಅರಿಯಡ್ಕ ನಿವಾಸಿ ನೆಕ್ರಾಜೆ ಜಗನ್ನಾಥ ಶೆಟ್ಟಿ (98) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಜಗನ್ನಾಥ ಶೆಟ್ಟಿ ಅವರು ಕುಂಬ್ಳೆ, ಪೈವಳಿಕೆ, ಸುಳ್ಯ, ಎಡನೀರು, ಕಾಸರಗೋಡು ಸರ್ಕಾರಿ ಶಾಲೆಗಳಲ್ಲಿ ಸುಮಾರು 30 ವರ್ಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಯಕ್ಷಗಾನ ಭಾಗವತಿಕೆಯಲ್ಲಿ ಹಲವಾರು ಪ್ರಶಸ್ತಿಗಳನ್ನೂ ಅವರು ಪಡೆದುಕೊಂಡಿದ್ದರು. ಮೃತರು 6 ಗಂಡು ಮತ್ತು 4 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.