ಸುಳ್ಯ: ಇಂದು, ನಾಳೆ ತಾಲೂಕು ಮಟ್ಟದ ಕ್ರೀಡಾಕೂಟ
ಸುಳ್ಯ: ದ.ಕ. ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಮತ್ತು ಕೆವಿಜಿ ಆಂಗ್ಲ ಮಾಂಧ್ಯಮ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕ್ರೀಡಾಕೂಟ ನ.6 ಮತ್ತು 7ರಂದು ಕುರುಂಜಿಭಾಗ್ನ ಕೆವಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕೆವಿಜಿ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎನ್.ಎ. ಜ್ಞಾನೇಶ್ ಈ ಮಾಹಿತಿ ನೀಡಿ, 6ರಂದು ಕ್ರೀಡಾಕೂಟವನ್ನು ರಾಜ್ಯ ಯುವಜನ, ಸೇವಾ, ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿ ವಂದನೆ ಸ್ವೀಕರಿಸುವರು. ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸುವರು ಎಂದರು.