ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಸೌಜನ್ಯಾ ಹೆತ್ತವರು ಸಾಕು ಎಂದಾಗ ಹೋರಾಟ ಸ್ಥಗಿತ'

Lingaraj Badiger
Updated On : 6 Nov 2013, 11:52 am

ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯಾ ಹತ್ಯಾಚಾರ ಪ್ರಕರಣದ ಕುರಿತು ಹೋರಾಟ ನಡೆಸುತ್ತಿರುವ ತಾನು, ಆಕೆಯ ಹೆತ್ತವರು ಸಾಕು ಎನ್ನುವವರೆಗೂ ಹೋರಾಟ ಮುಂದುವರಿಸುತ್ತೇನೆ ಎಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
 ಅವರು ಮಂಗಳವಾರ ಪಾಂಗಾಳದ ಸೌಜನ್ಯಾಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದರು. ಈಗಾಗಲೇ ಪ್ರಕರಣ ರಾಜ್ಯಮಟ್ಟಕ್ಕೆ ಮುಟ್ಟಿದೆ. ಇನ್ನು ಮುಂದೆ ಜನತೆ ಎದ್ದು ನಿಂತು ಪ್ರಕರಣವನ್ನು ಕೊನೆ ಮುಟ್ಟಿಸಲು ನಿರ್ಧರಿಸಬೇಕು ಎಂದ ಅವರು, ನಾನೊಬ್ಬ ಹಿಂದೂ ಸಮಾಜದ ಜವಾಬ್ದಾರಿಯತ ಸ್ವಾಮೀಜಿ. ಹೀಗಾಗಿ ನಾನು ಯಾವುದೇ ಧಾರ್ಮಿಕ ಸಂಸ್ಥೆಯ ವಿರುದ್ಧ, ಕ್ಷೇತ್ರದ ವಿರುದ್ಧ ಮಾತನಾಡಿಲ್ಲ ಎಂಬ ಅರಿವು ನನಗಿದೆ. ಅಲ್ಲದೆ ಇದು ನನ್ನ ಮೊದಲ ಹೋರಾಟವಲ್ಲ. ಕೊಡಚಾದ್ರಿ, ನಾಗಾರ್ಜುನ, ನಿಡ್ಡೋಡಿ, ಸೆಜ್ ಮೊದಲಾದ ಅನೇಕ ಕಡೆ ಹೋರಾಟ ಮಾಡುತ್ತಾ ಬಂದಿದ್ದೇನೆ. ಬಡವರಿಗೆ ಮತ್ತು ಪ್ರಕೃತಿಗೆ ತೊಂದರೆ ಆದಲ್ಲಿ ನಾನು ಹೋರಾಟಕ್ಕೆ ಸದಾ ಸಿದ್ಧ. ಅದೇ ದೃಷ್ಟಿಯಿಂದ ಸೌಜನ್ಯಾ ಪ್ರಕರಣದಲ್ಲೂ ಕಳೆದ ಒಂದು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ಸೌಜನ್ಯಾಳ ಹೆತ್ತವರು ನನ್ನ ಹೋರಾಟ ಸಾಕು ಎನ್ನುವವರೆಗೆ ಹೋರಾಟ ಮುಂದುವರಿಸುತ್ತೇನೆ ಎಂದ ಅವರು ಈ ಹೋರಾಟದಲ್ಲಿ ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದರು.
 ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ ಸೌಜನ್ಯಾ ಪ್ರಕರಣದ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ. ಹೀಗಾಗಿ ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಧರ್ಮಸ್ಥಳದಲ್ಲಿ ನಡೆದ ಎಲ್ಲ ಅಸಹಜ ಸಾವುಗಳ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
 ರಾಮ ಸೇನೆಯ ಪ್ರಸಾದ್ ಅತ್ತಾವರ, ಆಮ್ ಆದ್ಮಿಯ ವಿಷ್ಣುಮೂರ್ತಿ ಭಟ್, ರಾಬರ್ಟ್ ಡಿಸೋಜ, ನ್ಯಾಯವಾದಿ ಭಾಸ್ಕರ ಹೊಳ್ಳ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement