ಕರ್ಣಾಟಕ ಬ್ಯಾಂಕ್: ಬಡ್ಡಿ ದರ ಪರಿಷ್ಕರಣೆ
ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ದೇಶೀಯ ಬಡ್ಡಿ ದರವನ್ನು ನ.7ರಿಂದ ಅನ್ವಯವಾಗುವಂತೆ ಪರಿಷ್ಕರಿಸಿದೆ. 121 ರಿಂದ 180 ದಿನಕ್ಕೆ ಶೇ.8, 181ರಿಂದ 364 ದಿನಕ್ಕೆ ಶೇ.8.50, 1 ವರ್ಷದಿಂದ 2 ವರ್ಷ ಶೇ.9.50 ( 5 ಕೋಟಿಗಿಂತ ಅಧಿಕ ಠೇವಣಿಗೆ ಶೇ.9.25), 2 ರಿಂದ 3 ವರ್ಷ ಶೇ.9.25 (5 ಕೋಟಿಗಿಂತ ಜಾಸ್ತಿ ಠೇವಣಿಗೆ ಶೇ.9), 3 ವರ್ಷ ಶೇ.9 (5 ಕೋಟಿವರೆಗೆ) ನಿಗದಿಪಡಿಸಲಾಗಿದೆ. ಹಿರಿಯನ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ.0.50 ಬಡ್ಡಿದರ ಸೇರಿಸಲಾಗುವುದು. ಎನ್ಆರ್ಇ ಅವಧಿಯ ಠೇವಣಿಗೆ 1ರಿಂದ 2 ವರ್ಷ ಶೇ.9.50, 2ರಿಂದ 3 ವರ್ಷ ಶೇ.9.25, 3 ವರ್ಷದಿಂದ 5 ವರ್ಷ ಶೇ.9.75, 5 ವರ್ಷದಿಂದ 10 ವರ್ಷ ಶೇ.9.50 ಬಡ್ಡಿದರ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.