ಬೊಡ್ಡ ಹನೀಫ್ ಡಬ್ಬಲ್ ಮರ್ಡರ್ ಆರೋಪಿ
ಮಂಗಳೂರು: ಕೆ.ಎಸ್.ರಾವ್ ರಸ್ತೆಯಲ್ಲಿ ತಳವಾರ್ಗಳ ಏಟು ತಿಂದಿರುವ ರೌಡಿ ಹನೀಫ್ ಯಾನೆ ಬೊಡ್ಡ ಹನೀಫ್ ತಲಪಾಡಿ ಡಬ್ಬಲ್ ಮರ್ಡರ್, ಪೊಳಲಿ ಅನಂತ್ ಕೊಲೆ ಪ್ರಕರಣಗಳ ಆರೋಪಿ.
ಮೂಲ್ಕಿ ರಫೀಕ್ ಸಹಚರನಾಗಿದ್ದು ಹನೀಫ್, ಕಂಕನಾಡಿ ಬಳಿ ಮಟನ್ ಸ್ಟಾಲ್ ಹೊಂದಿದ್ದ ರಿಜ್ವಾನ್ ಮತ್ತು ಅಮೀರ್ ಹುಸೇನ್ ಸಹೋದರರನ್ನು ತಲಪಾಡಿ ಕೆ.ಸಿ.ರೋಡ್ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಉಳ್ಳಾಲ ಠಾಣಾಧಿಕಾರಿ ಶಶಿಧರ್ ಈತ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಾಕ್ಷಿಗಳ ಕೊರತೆಯಿಂದ ಖುಲಾಸೆಗೊಂಡಿದ್ದ.
2004ರ ಆರಂಭದಲ್ಲಿ ಚಂದ್ರಶೇಖರ್ ಉಚ್ಚಿಲರ ಹತ್ಯೆಗೆ ಯತ್ನಿಸಿದ್ದ. ಈ ಪ್ರಕರಣದಲ್ಲಿ ನಾಸಿರ್ ಮತ್ತು ಹನೀಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣದ ವಿಚಾರಣೆಗೆ ಕೋರ್ಟ್ಗೆ ಬಂದಿದ್ದರು.
2005ರಲ್ಲಿ ಜಬ್ಬಾರ್ ಹತ್ಯೆಗೆ ಪ್ರತಿಕಾರವಾಗಿ ಪೊಳಲಿ ಅನಂತುವನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮೂಲ್ಕಿ ರಫೀಕ್ ಗ್ಯಾಂಗ್ನಲ್ಲಿದ್ದ ಹನೀಫ್ನನ್ನು ಅನಂತು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದ್ದರು. ಮೂಲ್ಕಿ ರಫೀಕ್ ಎನ್ಕೌಂಟರ್ ಆದ ಬಳಿಕ ಹನೀಫ್ ಪೀಲ್ಡ್ನಲ್ಲಿ ಹಿನ್ನಡೆ ಕಂಡಿದ್ದ. ಸುಖಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿಬಂದಿತ್ತು. ಈತನನ್ನು ಸಕಲೇಶಪುರದಲ್ಲಿ ಅಂದಿನ ಪಾಂಡೇಶ್ವರ ಇನ್ಸ್ಪೆಕ್ಟರ್ ಎಚ್.ಎನ್.ವೆಂಕಟೇಶ್ ಪ್ರಸನ್ನ ಬಂಧಿಸಿದ್ದರು.