ಸ್ವೀಟಿ ಬಿಡುಗಡೆ: ಜೈ ಜಗದೀಶ್ ಕುಟುಂಬ ಕಟೀಲು ಭೇಟಿ
ಮೂಲ್ಕಿ: ಕನ್ನಡ ಚಲನಚಿತ್ರ ನಟ ಜೈ ಜಗದೀಶ್ ಕುಟುಂಬ ಸಮೇತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಜೈ ಜಗದೀಶ್ ಪತ್ನಿ ವಿಜಯ ಲಕ್ಷ್ಮೀಸಿಂಗ್ ನಿರ್ದೇಶನದ 'ಸ್ವೀಟಿ ನನ್ ಜೋಡಿ' ಚಲನಚಿತ್ರ ಡಿ.8ರಂದು ತೆರೆ ಕಾಣಲಿದ್ದು ಬಿಡುಗಡೆ ಮುಂಚೆ ದೇವಿಯ ಆಶೀರ್ವಾದ ಪಡೆಯಲು ಕಟೀಲಿಗೆ ಆಗಮಿಸಿದ್ದಾಗಿ ಜೈಜಗದೀಶ್ ತಿಳಿಸಿದರು. ಇಂದಿನ ದಿನಗಳಲ್ಲಿ ಕಿರುತೆರೆ ಚಲನಚಿತ್ರಕ್ಕಿಂತ ಹೆಚ್ಚಿನ ಪ್ರಭಾವ ಬೀರುತ್ತಿದೆ. ಕಿರುತೆರೆಗಾಗಿ ಕಾರ್ಯಕ್ರಮ ನಿರ್ಮಿಸಿದ್ದು ಮುಂದಿನ ದಿನಗಳಲ್ಲಿ ಧಾರವಾಹಿ ನಿರ್ಮಿಸುವ ಯೋಜನೆ ಹಮ್ಮಿಕೊಂಡುರುವುದಾಗಿ ತಿಳಿಸಿದರು.
'ಬಿಗ್ಬಾಸ್' ರಿಯಾಲಿಟಿ ಶೋ ಬಳಿಕ ರಿಷಿಕಾಗೆ ಹೆಚ್ಚಿನ ಅವಕಾಶಗಳು ಬರುತ್ತಿದ್ದು ತೆಲುಗು ಚಿತ್ರವೊಂದು ಶೀಘ್ರವೇ ತೆರೆ ಕಾಣಲಿದೆ. 'ಮುಸ್ಸಂಜೆ' ಮಹೇಶ್ ನಿರ್ದೇಶನದ 'ತುಂತುರು' ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದರು.