'ಮೂಢನಂಬಿಕೆ ತಡೆ ಕಾಯ್ದೆ ಜಾರಿಆದರೆ ಪ್ರತಿಭಟನೆ'
ಮಂಗಳೂರು: ಮೂಢನಂಬಿಕೆ ತಡೆ ಕಾಯ್ದೆ ಜಾರಿಯಾದರೆ ಹಿಂದು ಜಾಗರಣೆ ವೇದಿಕೆ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದುಯೇತರರ ಓಲೈಕೆಗೆ ಹೊಸ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದರಿಂದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಘಾಸಿಯಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಿಭಾಗೀಯ ಅಧ್ಯಕ್ಷ ವಾಸುದೇವ ಗೌಡ, ನಗರ ಸಂಚಾಲಕ ಗಣಪತಿ ಬಂಗೇರ, ಕಾರ್ಯದರ್ಶಿ ಸುಭಾಷ್ ಪಡೀಲ್ ಇದ್ದರು.