ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಸಾಮಾಜಿಕವಾಗಿ ತೊಡಗಿಕೊಳ್ಳಿ'

Lingaraj Badiger
Updated On : 11 Nov 2013, 12:44 pm

ಮಂಗಳೂರು: ಜಾತಿ, ಧರ್ಮ, ಮೀಸಲಾತಿ ಬಗ್ಗೆ ವೇದಿಕೆಯಲ್ಲಿ ಭಾಷಣ ಮಾಡಿದರೆ ಸಾಲದು, ಸಾಮಾಜಿಕವಾಗಿ ತನ್ನ ವ್ಯಕ್ತಿತ್ವವನ್ನು ನಡವಳಿಕೆಯಲ್ಲಿ ತೋರ್ಪಡಿಸಿಕೊಳ್ಳಬೇಕಾಗುತ್ತದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಭಾನುವಾರ ನಗರದ ಶ್ರೀನಿವಾಸ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲ ಬಿ.ಎ. ಮುಹಮ್ಮದ್ ಹನೀಫ್ ಅವರ 'ಜಾತಿ, ಧರ್ಮ ಮತ್ತು ಮೀಸಲಾತಿ' ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಸಮಾನತೆ ದೂರ ಮಾಡಿ ಸಮಾನತೆಯಿಂದ ಎಲ್ಲರನ್ನೂ ನಡೆಸಿಕೊಂಡಾಗ ಮಾತ್ರ ಸಮಾಜ ಬಲಿಷ್ಠಗೊಳ್ಳಲು ಸಾಧ್ಯ ಎಂದರು. ಮಾಜಿ ಸಚಿವ ಬಿ.ಎ. ಮೈದಿನ್ ಮಾತನಾಡಿದರು.
ಸಾಲ್ಯಾನ್, ಹಾಜಬ್ಬ, ರಾಜಶೇಖರ್‌ಗೆ ಗೌರವ: ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕಂಬಳ ಸಾಧಕ ಸದಾಶಿವ ಸಾಲ್ಯಾನ್ ಮೂಲ್ಕಿ ಮತ್ತು ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ ಹಾಗೂ ದಲಿತ್ ವಾಯ್ಸ್ ಸಂಪಾದಕ ವಿ.ಟಿ. ರಾಜಶೇಖರ್ ಅವರನ್ನು ಗೌರವಿಸಲಾಯಿತು. ಉಡುಪಿ ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯೋಜಕಿ ಡಾ. ನಿಕೇತನ ಪುಸ್ತಕ ಪರಿಚಯ ಮಾಡಿದರು. ಹೈಕೋರ್ಟ್ ವಕೀಲ ತಾರಾನಾಥ ಪೂಜಾರಿ, ಕುಡುಪು ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಅಂಡ್ ಎಜ್ಯುಕೇಶನ್ ನಿರ್ದೇಶಕಿ ಡಾ. ರೀಟಾ ನೊರ್ಹೊನ, ಅಹಿಂದ ಜನಚಳುವಳಿ ಗೌರವಾಧ್ಯಕ್ಷ ವಾಸುದೇವ ಬೋಳೂರು, ದ.ಕ. ಮತ್ತು ಉಡುಪಿ ಹಿಂದುಳಿದ ಜಾತಿಗಳ ಒಕ್ಕೂಟ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement