ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಂದಾಪುರದಿಂದ ಬೆಂಗಳೂರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಬೈಕ್ ಸವಾರಿ!

Rashmi Kasaragodu
Updated On : 12 Nov 2013, 12:04 pm

ಉಡುಪಿ: ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಲಾಸ್ ನಾಯಕ್ ಕಣ್ಣಿಗೆ ಬಟ್ಟೆ ಕಟ್ಟಿ 415 ಕಿ.ಮೀ. ಬೈಕ್ ಓಡಿಸಿ ಹೊಸ ಲಿಮ್ಕಾ ದಾಖಲೆ ಸ್ಥಾಪಿಸುವ ಸಾಧನೆಗೆ ಸಿದ್ಧವಾಗಿದ್ದಾರೆ.
 17ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ನರೇಂದ್ರ ಮೋದಿ ರ್ಯಾಲಿಯಲ್ಲಿ ಭಾಗವಹಿಸುವುದಕ್ಕೆ ವಿಲಾಸ್ ನಾಯಕ್ ಬೈಕಿನಲ್ಲಿ 16ರಂದು ರಾತ್ರಿ 8 ಗಂಟೆಗೆ ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಕಣ್ಣಿಗೆ ಬಟ್ಟೆ ಕಟ್ಟಿ ಹೊರಟು ಮರುದಿನ ಬೆಳಗ್ಗೆ 8 ಗಂಟೆಗೆ ಅರಮನೆ ಮೈದಾನ ತಲುಪಲಿದ್ದಾರೆ, ಜೊತೆಗೆ ಈ ಲಿಮ್ಕಾ ದಾಖಲೆ ನಿರ್ಮಿಸಲಿದ್ದಾರೆ. ಈಗಾಗಲೇ ಉಡುಪಿಯವರೇ ಆದ ಸಮರ್ಥ್ ಶೆಣೈ ಮೈಸೂರಿನಿಂದ ಮಂಗಳೂರು ತನಕ 318 ಕಿ.ಮೀ. ದೂರವನ್ನು ಕಣ್ಣಿಗೆ ಬಟ್ಟೆ ಕಟ್ಟಿ ಬೈಕು ಓಡಿಸಿ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ. ಅದನ್ನು ವಿಲಾಸ್ ನಾಯಕ್ ಮುರಿಯುವ ಉತ್ಸಾಹದಲ್ಲಿದ್ದಾರೆ.   ಅವರೊಂದಿಗೆ ಇನ್ನೂ 2000 ಬೈಕುಗಳಲ್ಲಿ ತಲಾ ಇಬ್ಬರಂತೆ 4000 ಮಂದಿ ಕೂಡ ಈ ರ್ಯಾಲಿಗೆ ತೆರಳಲಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬೈಕಿನಲ್ಲಿ ಇಷ್ಟು ದೂರ ಕ್ರಮಿಸುವುದು ಕೂಡ ಒಂದು ದಾಖಲೆಯಾಗಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ವಿಲಾಸ್ ನಾಯಕ್ ಮತ್ತವರ ತಂಡವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ನಾಯಕರು ಭವ್ಯವಾಗಿ ಸ್ವಾಗತಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement