ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಘೇರಾವ್ಗೆ ಸಿದ್ಧತೆ: ಕೆಜೆಪಿ ಮುಖಂಡರ ಸೆರೆ, ಬಿಡುಗಡೆ

Rashmi Kasaragodu
Updated On : 12 Nov 2013, 12:04 pm

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಘೇರಾವ್ ಮಾಡಲು ತೆರಳುತ್ತಿದ್ದ ಕೆಜೆಪಿ ಕಾರ್ಯಕರ್ತರನ್ನು ಪೊಲೀಸರು ನಂತೂರು ಮತ್ತು ಕಾವೂರಿನಲ್ಲಿ ತಡೆದು ಬಂಧಿಸಿದ್ದಾರೆ.
 ಶಾದಿ ಭಾಗ್ಯ ಯೋಜನೆ ಎಲ್ಲ ಸಮುದಾಯದ ಬಡವರಿಗೆ ವಿಸ್ತರಿಸುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಘೇರಾವ್ ಹಾಕಲು ಕೆಜೆಪಿ ಕಾರ್ಯಕರ್ತರು ಸಿದ್ಧರಾಗಿದ್ದರು. ಆದರೆ ಪೊಲೀಸರು ಅವರನ್ನು ಸಿದ್ದರಾಮಯ್ಯ ಬಳಿ ಸುಳಿಯದಂತೆ ಮಾಡಿದರು. ಮಂಗಳೂರಿಂದ ಹೊರಟಿದ್ದ ಕೆಜೆಪಿ ಮುಖಂಡರನ್ನು ಕದ್ರಿ ಪೊಲೀಸರು ನಂತೂರು ಬಳಿ ಬಂಧಿಸಿದರೆ, ಕಾವೂರು ಬಳಿ ತೆರಳುತ್ತಿದ್ದ ಕಾರ್ಯಕರ್ತರನ್ನು ಕಾವೂರು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಕೈ ಎತ್ತಿದ ಸಚಿವರು!
ಮಂಗಳೂರು: 'ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ, ನೀವೆಲ್ಲ ಬೆಂಬಲ ನೀಡುತ್ತಿರಲ್ಲ ಕೈ ಮೇಲೆತ್ತಿ' ಎಂದು ಬಜಪೆ ಶ್ರೀನಾರಾಯಣಗುರುಗಳ ಬಿಂಬ ಪ್ರತಿಷ್ಠೆ ಸಮಾರಂಭದಲ್ಲಿ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮೂವರು ಸಚಿವರಿಗೆ ಕೇಳಿದರು.
 ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್ ನಿಧಾನವಾಗಿ ಎದ್ದರು. ಎದ್ದ ತಕ್ಷಣ ಪೂಜಾರಿ 'ಬೆಂಬಲ ನೀಡುತ್ತೀರಿ ಹೌದಾದರೆ ಕೈ ಮೇಲೆತ್ತಿ' ಎಂದರು. ಸಚಿವರು ಎರಡೂ ಕೈಗಳನ್ನು ಮೇಲೆತ್ತಿದ್ದರು. ಇದೇ ರೀತಿ ಕಾರ್ಯಕ್ರಮಕ್ಕೆ ಬಂದ ಪ್ರೇಕ್ಷಕರಿಗೂ ಪೂಜಾರಿ ಕೈ ಮೇಲೆತ್ತುವಂತೆ ಹೇಳಿದರು. ಸಭೆಯಲ್ಲಿದ್ದವರೆಲ್ಲ ಎದ್ದು ನಿಂತು ಕೈ ಮೇಲೆತ್ತಿದರು.
ಬಿಂಬ ಪ್ರತಿಷ್ಠೆ
ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ನೂತನ ಮಂದರಿದಲ್ಲಿ ನಾರಾಯಣಗುರುಗಳ ಬಿಂಬ ಪ್ರತಿಷ್ಠಾಪನೆ, ಬ್ರಹ್ಮಕಲಷಾಭಿಷೇಕ, ನಾರಾಯಣಗುರು ಸಮುದಾಯ ಭವನ ಉದ್ಘಾಟನೆ ನಡೆಯಿತು. ಸಂಘದ ಅಧ್ಯಕ್ಷ ವಸಂತಕುಮಾರ್ ಬಂಗೇರ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಅರಣ್ಯ ಸಚಿವ ಬಿ.ರಮಾನಾಥ ರೈ, ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವಸಂತ ಬಂಗೇರ, ಅಖಿಲಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ಚಂದ್ರ ಡಿ.ಸುವರ್ಣ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement