ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಟ್ಟಭದ್ರರಿಂದಲೇ ಬದಲಾವಣೆಗೆ ಅಡ್ಡಿ

Rashmi Kasaragodu
Updated On : 12 Nov 2013, 12:04 pm

ಮಂಗಳೂರು: ಜಾತಿ ವ್ಯವಸ್ಥೆ ಬಯಸುವ ಫಟ್ಟಭದ್ರರಿಂದಲೇ ಸಮಾಜ ಬದಲಾಣೆಗೆ ಅಡ್ಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
 ಬಜಪೆ ಕರಂಬಾರಿನಲ್ಲಿ ಸೋಮವಾರ ಶ್ರೀನಾರಾಯಣಗುರು ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ವ್ಯವಸ್ಥೆ ಬದಲಾವಣೆಗೆ ಯಾರು ವಿರುದ್ಧವಾಗಿದ್ದಾರೆ ಎಂಬುದನ್ನು ನಾವು ಮನಗಾಣಬೇಕು. ಜಾತಿ ವ್ಯವಸ್ಥೆ ಗಟ್ಟಿಯಾಗಿರಬೇಕು, ಬದಲಾವಣೆ ಆಗಬಾರದು ಎಂಬವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವರನ್ನು ತಿಳಿದುಕೊಳ್ಳದೆ ಹೋದರೆ ಪ್ರಗತಿ ಸಾಧ್ಯವಿಲ್ಲ ಎಂದರು.
 ಶೂದ್ರರು ಶತಮಾನಗಳಿಂದ ಶೋಷಣಗೆ ಒಳಗಾಗಿ ಅಕ್ಷರ ಕಲಿಕೆಯಿಂದ ವಂಚಿತರಾಗಿ ನರಳುತ್ತಿದ್ದಾರೆ. ಎಲ್ಲರೂ ಸಂಘಟಿತರಾಗಿ ರಾಜಕೀಯ ಶಕ್ತಿಯಾಗಬೇಕು ಶೂದ್ರ ವರ್ಗದ ಜನರಲ್ಲಿ ಕಳಕಳಿಯ ಪ್ರಾರ್ಥನೆ ಎಂದರೆ, ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದೀರಿ. ನಿಮ್ಮಲ್ಲಿ ಬದಲಾವಣೆ ಆಗಬೇಕಾದರೆ ಸಂಘಟಿತರಾಗಬೇಕು, ಶಿಕ್ಷಣ ಪಡೆಯಬೇಕು ಇದು ಗುರುಗಳಿಗೆ, ಶರಣರಿಗೆ ಸಲ್ಲಿಸುವ ಗೌರವ ಎಂದರು.  ಬಡವರು ಎಲ್ಲ ಜಾತಿಯಲ್ಲಿ ಇದ್ದಾರೆ.  ಅವರೆಲ್ಲರಿಗೆ ನ್ಯಾಯ ಒದಗಿಸಲು ಪ್ರಯತ್ತಿಸುತ್ತೇನೆ. ಜಾತಿ ಹೋಗಬೇಕು ಎಂದರೆ ಸುಲಭವಾಗಿ ಹೋಗಲ್ಲ, ಜಾತ್ಯತೀತ ಸಮಾಜ ನಿರ್ಮಾಣ ಬೋಧನೆಗಳಿಂದ ಸಾಧ್ಯವಿಲ್ಲ. ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಮಾತ್ರ ಜಾತಿ ನಿವಾರಣೆ ಸಾಧ್ಯ ಎಂದರು.
 ಬಿಲ್ಲವರಲ್ಲಿ ಬಹಳಷ್ಟು ಮಂದಿ ಅನಕೂಲಸ್ಥರು ಇದ್ದಾರೆ. ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಕಟ್ಟಿ ಸಮುದಾಯದ ಬಡವರಿಗೆ ಶಿಕ್ಷಣ ನೀಡಿ ಎಂದು ಸಲಹೆ ಮಾಡಿದರು.
 ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿವಿಯಲ್ಲಿ ಆರಂಭಿಸಲು 2 ಕೋಟಿ, ಪಡುಮಲೆ ಅಭಿವೃದ್ಧಿಗೆ 5 ಕೋಟಿ  ಕೋಡಿಸುತ್ತೇನೆ. ಮೂರ್ತೆದಾರರಿಗೆ ಆವರ್ತನಿಧಿ ಇಡಲು ಹೇಳಿದ್ದಾರೆ. ಅದಕ್ಕೆ ಪ್ರಯತ್ನಿಸುತ್ತೇನೆ. ಸೊರಕೆ ಹೇಳಿರುವ ಕಟಪಾಡಿ ಕ್ಷೇತ್ರಕ್ಕೂ ಹಣ ಬಿಡುಗಡೆ ಮಾಡುತ್ತೇನೆ.
ಮನೆ ಕಟ್ಟಲು ಅವಕಾಶ: 3 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟುವವರಿಗೆ ಅವಕಾಶ, 9/11 ಫಾರಂನಲ್ಲಿ ನಿಯಮಗಳಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ವಿನಾಯಿತಿ ನೀಡುವ ಬಗ್ಗೆ ಆದೇಶ ಮಾಡುತ್ತೇವೆ ಎಂದು ಹೇಳಿದರು.
ಶ್ರೀಮಂತ ದೇವಸ್ಥಾನ ಬೇಡ: ಜನ ಸ್ವಾಭಿಮಾನಿಯಾಗಿ ಬದುಕಬೇಕದಾರೆ ಶಿಕ್ಷಣ ಅಗತ್ಯ. ಶಿಕ್ಷಣದಿಂದ ಶೋಷಣೆಯಿಂದ ಮುಕ್ತರಾಗಿ ಬದುಕಲು ಸಾಧ್ಯ ಎಂದು ನಾರಾಯಣಗುರುಗಳುಮನಗಂಡಿದ್ದರು. ನಾರಾಯಣ ಗುರುಗಳು ಕೂಡಾ ಸರಳವಾಗಿ ಬೋಧನೆ ಮಾಡುತ್ತಿದ್ದರು. ದೇವಸ್ಥಾನಗಳು ಕೂಡಾ ಸರಳವಾಗಿರಬೇಕು. ಶ್ರೀಮಂತಿಕೆಯಿಂದ ಇರಬೇಕು ಎಂದು ಹೇಳಿಲ್ಲ. ದೇವಸ್ಥಾನಗಳಲ್ಲಿ ಗ್ರಂಥಾಲಯ, ಪಾರ್ಕ್, ಸಣ್ಣ ಕೈಗಾರಿಕೆ ಇರಬೇಕು ಕಲ್ಪನೆ ಇಟ್ಟುಕೊಂಡಿದ್ದರು. ಒಂದೇ ದೇವರು, ಒಂದೇ ಧರ್ಮ, ಒಂದೇ ಜಾತಿ. ನೇರವಾಗಿ ಸಂಘರ್ಷಕ್ಕೆ ಇಳಿಯಿದ್ದದರೂ ಸುಧಾರಣೆ ಮೂಲಕ ಮಾಡಿ ತೋರಿಸಿದರು.
ನಾವೆಲ್ಲ ಹಾಳಾಗಿ ಬಿಟ್ವಿ! :  ಕುರಿ ಕಾಯುತ್ತಿದ್ದ ಕುರುಬ ಆದ, ಹೆಂಡ ಸಾರಾಯಿ ಮಾರುವವರು ಈಳವರಾದರು, ನಾವೆಲ್ಲ ಹಾಳಾಗಿಬಿಟ್ವಿ. ನಮಗೆ ವಿದ್ಯೆ ಕಲಿಯಲೇ ಬಿಟ್ಟಿಲ್ಲ. ಒಂದು ವೇಳೆ ನಾರಾಯಣಗುರು ವಿದ್ಯೆ ಕಲಿಸದೇ ಇದ್ದರೆ ಏನಾಗುತ್ತಿತ್ತು? ಅಂಬೇಡ್ಕರ್ ವಿದ್ಯೆ ಕಲಿಸದಿದ್ದರೆ ಏನಾಗುತ್ತಿತ್ತು. ದೇಶದ ಸಂವಿಧಾನ ಬರೆಯುವ ಶಕ್ತಿ ದಲಿತ ವರ್ಗದವರಿಗೆ ಬರಲು ಅಸಾಧ್ಯವಾಗಿತ್ತು ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement