ಬ್ರಾಹ್ಮಣರಿಗೆ ಮೀಸಲು ನೀಡಿ: ಪೂಜಾರಿ
ಮಂಗಳೂರು: ಇದುವರೆಗೆ ಯಾವು ಮುಖ್ಯಮಂತ್ರಿಯೂ ಬ್ರಾಹ್ಮಣರಿಗೆ ಮೀಸಲು ನೀಡಿಲ್ಲ, ಸಿದ್ದರಾಮಯ್ಯನವರೇ ನೀವು ಈ ಕೆಲಸ ಮಾಡಿ ದಾಖಲೆ ಮಾಡಿ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಸಲಹೆ ಮಾಡಿದರು. ಎಲ್ಲ ಜಾತಿಯಲ್ಲಿಯೂ ಬಡವರಿದ್ದಾರೆ. ಬ್ರಾಹ್ಮಣರಲ್ಲಿಯೂ ಬಡವರಿದ್ದಾರೆ. ಬಡವರ ಕಣ್ಣೀರು ಒರೆಸಿ ಎಂದರು. 6 ಕೋಟಿ ಜನರು ಸಿದ್ದರಾಮಯ್ಯ ಅವರಲ್ಲಿ ದೇವರಾಜ ಅರಸ್ ಅವರನ್ನು ಕಾಣುತ್ತಿದ್ದಾರೆ. ಚುನಾವಣೆ ವೇಳೆ ಕಾಂಗ್ರೆಸ್ 200 ಭರವಸೆಗಳನ್ನು ನೀಡಿದೆ. ಅದನ್ನು ಹಂತಹಂತವಾಗಿ ಜಾರಿ ಮಾಡುತ್ತಿದ್ದಾರೆ.
ಮೂಢನಂಬಿಕೆ ವಿರುದ್ಧ ಜಾಗೃತಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಭೇಟಿ ನೀಡುವ ಮೂಲಕ ಮೌಢ್ಯ ಮುರಿದರು. ಮೂಢ ನಂಬಿಕೆ ವಿರುದ್ಧ ಈ ರೀತಿ ಜಾಗೃತಿ ಮಾಡಿದರು. ಮೂಢನಂಬಿಕೆ ವಿರುದ್ಧ ಕಾನೂನು ಮೂಲಕ ನಿಷೇಧ ಮಾಡುವುದಲ್ಲ, ಜಾಗೃತಿ ಮೂಡಿಸಬೇಕು ಎಂದು ಪೂಜಾರಿ ಹೇಳಿದರು.