ಅಂಗಡಿ ಮಾಲೀಕನಿಗೆ ಮಾರಣಾಂತಿಕ ಹಲ್ಲೆ
ವಿಟ್ಲ: ಅಂಗಡಿಗಳೆರಡರ ನಾಮಫಲಕಕ್ಕೆ ಸಂಬಂಧಿಸಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭದಲ್ಲಿ ಹೊರಗಿನಿಂದ ಬಂದ ಇಬ್ಬರಲ್ಲಿ ಒಬ್ಬ ಅಂಗಡಿ ಮಾಲೀಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ವಿಟ್ಲ- ಮಂಗಳೂರು ರಸ್ತೆಯಲ್ಲಿ ನಡೆದಿದೆ. ರಫೀಕ್ ಒಕ್ಕೆತ್ತೂರು ಹಾಗೂ ಕೊಡುಂಗಾಯಿ ಸಾದಿಕ್(ಮಂಗಲಪದವು ನಿವಾಸಿ) ಅಂಗಡಿಗೆ ಆಗಮಿಸಿದ್ದು ಮಾಲಿಕರಿಗೆ ಹಲ್ಲೆ ನಡೆಸಲಾಗಿದೆ. ವಿಟ್ಲ ಪೊಲೀಸರು ಕೊಡುಂಗಾಯಿಯ ಸಾದಿಕ್ನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.