ಇಂದು ಭರತನಾಟ್ಯ
ಮಂಗಳೂರು: ನಾಟ್ಯಾಂಜಲಿ ಕಲಾ ಅಕಾಡೆಮಿ ವತಿಯಿಂದ 13 ರಂದು ಸಂಜೆ 5ಕ್ಕೆ ಪುರಭವನದಲ್ಲಿ 'ಪ್ರಕೃತಿ- ಪುರುಷ' ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ್ ಆಳ್ವರವರು ಉದ್ಘಾಟಿಸುವರು. ಭರತನಾಟ್ಯ ಹಿರಿಯ ಕಲಾವಿದ ಉಳ್ಳಾಲ ಮೋಹನ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಪಾಲ್ಗೊಳ್ಳುವರು ಎಂದು ಅಕಾಡೆಮಿಯ ಗಿರೀಶ್ ಕಶ್ಯಪ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನೃತ್ಯೋತ್ಸವದಲ್ಲಿ ಕೇರಳದ ಶಫಿಕುದ್ದೀನ್ ಮತ್ತು ಶಬನಾ ದಂಪತಿಗಳಿಂದ ಭರತನಾಟ್ಯ ಹಾಗೂ ಬೆಂಗಳೂರಿನ ತುಷಾರ್ ಭಟ್ ಮತ್ತು ಪೂಜಾ ಭಟ್ ಇವರಿಂದ ಕಥಕ್ ನೃತ್ಯ, ಚೆನ್ನೈನ ಜೈ ಕಿಶೋರ್ ಮೊಸಾಲಿಕಾಂತಿ ಮತ್ತು ಪದ್ಮವಾಣಿ ದಂಪತಿಗಳಿಂದ ಕೂಚುಪುಡಿ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.