ಉಮೇಶ್ ಎಕ್ಕಾರುಗೆ ಸನ್ಮಾನ
ಮೂಲ್ಕಿ: ಕಿನ್ನಿಗೋಳಿಯ ಯುಗಪುರುಷ ಮತ್ತು ವಿಜಯ ಕಲಾವಿದರು ಸಂಸ್ಥೆಯ ವತಿಯಿಂದ ಕಿನ್ನಿಗೋಳಿಯ ಯುಗಪುರುಷದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ,ನಿವೃತ್ತ ಶಿಕ್ಷಕ ಉಮೇಶ್ ರಾವ್ ಎಕ್ಕಾರು ಅವರನ್ನು ಶ್ರೀ ಕ್ಷೇತ್ರ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸನ್ಮಾನಿಸಿದರು. ಕಿನ್ನಿಗೋಳಿಯ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ವಿಜಯ ಕಲಾವಿದರು ಸಂಸ್ಥೆಯ ಶರತ್ ಶೆಟ್ಟಿ, ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಾಲಕೃಷ್ಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಯರಾಮ ಪೂಂಜ, ಸಾಹಿತಿ ಎನ್.ಪಿ. ಶೆಟ್ಟಿ, ವೇದವ್ಯಾಸ ಉಡುಪ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಕಿನ್ನಿಗೋಳಿಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ಇದ್ದರು.