ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಸೆರೆ
ಮಂಗಳೂರು: ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರ ಜಪ್ಪಿನಮೊಗರು ಶಿವ (26) ಎಂಬಾತನನ್ನು ಸಿಸಿಬಿ ಪೊಲೀಸರು ಜಪ್ಪಿನಮೊಗರು ಕಂರ್ಭಿಸ್ಥಾನದ ಬಳಿ ಮಂಗಳವಾರ ಬೆಳಗ್ಗಿನ ಜಾವ ಬಂಧಿಸಿದ್ದಾರೆ.
ಆಕಾಶಭವನದ ಶರಣ್ ಎಂಬಾತ ಸಹಚರರೊಂದಿಗೆ ಟಾಟಾ ಇಂಡಿಕಾ ಕಾರಿನಲ್ಲಿ ಮಾರಕಾಸ್ತ್ರಗಳೊಂದಿಗೆ ಕಂರ್ಭಿಸ್ಥಾನ ದ್ವಾರದ ಕಡೆಗೆ ಬರುತ್ತಿದ್ದಾಗ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಶರಣ್ ಮತ್ತು ಸಹಚರರು ಪರಾರಿಯಾಗಿದ್ದು, ಶಿವ ಸೆರೆಸಿಕ್ಕಿದ. ಟಾಟಾ ಇಂಡಿಕಾ ಕಾರು, 4 ತಲವಾರು ಮತ್ತು ಮೆಣಸಿನ ಹುಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್ಐ ಶ್ಯಾಮ್ ಸುಂದರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.