ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಕ್ಕಳ ಮದುವೆಗೆ ಆರ್ಥಿಕ ಅಡಚಣೆ; ದಂಪತಿ ಆತ್ಮಹತ್ಯೆ

Rashmi Kasaragodu
Updated On : 13 Nov 2013, 12:16 pm

ಮಲ್ಪೆ: ಇಲ್ಲಿನ ನೇಜಾರು ಗ್ರಾಪಂ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ರಾಜೀವನಗರ ಎಂಬಲ್ಲಿ ಮಕ್ಕಳ ಮದುವೆಗೆ ಆರ್ಥಿಕ ಅಡಚಣೆಯಿಂದಾಗಿ ತಂದೆ ತಾಯಿಗಳಿಬ್ಬರೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ರತ್ನಾಕರ ನಾಯ್ಕ್ (51) ಮತ್ತು ಪದ್ಮಾವತಿ (48). ರತ್ನಾಕರ ನಾಯಕ್ ಮೇಸ್ತ್ರಿ (ಕಟ್ಟಡ ಕಾರ್ಮಿಕ) ಕೆಲಸ ಮಾಡುತ್ತಿದ್ದು, ಅವರ ಪತ್ನಿ ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರ ಮಗ ಮತ್ತು ಮಗಳು ಇಬ್ಬರಿಗೂ ಜನವರಿ ತಿಂಗಳಲ್ಲಿ ಮದುವೆ ನಿಶ್ಟಯವಾಗಿದೆ. ಆದರೆ ಅದಕ್ಕೆ ಸಾಕಷ್ಟು ಹಣ ಕೈಯಲ್ಲಿ ಇರಲಿಲ್ಲ, ಅಲ್ಲಿ ಇಲ್ಲಿ ಸಹಾಯ ಪಡೆದಿದ್ದರೂ ಅದು ಸಾಕಾಗದೇ ತೀವ್ರವಾಗಿ ಚಿಂತೆಗೀಡಾಗಿದ್ದರು. ಜತೆಗೆ ಇಬ್ಬರಿಗೂ ಮದ್ಯಪಾನದ ಚಟ ಇತ್ತು. ಇವೆಲ್ಲಾ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಮಧ್ಯಾಹ್ನ ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಗ ಸುನಿಲ್ ನಾಯ್ಕ್ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement