ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮರದ ದಿಮ್ಮಿ ಸಾಗಾಟ: ಆರೋಪಿ ಬಂಧನ

Rashmi Kasaragodu
Updated On : 13 Nov 2013, 12:12 pm

ಬಂಟ್ವಾಳ: ಟೆಂಪೊವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರದ ದಿಮ್ಮಿಗಳನ್ನು ಬಿಮೂಡ ಗ್ರಾಮದ ಗಾಣದಪಡ್ಪು ಎಂಬಲ್ಲಿ ಪತ್ತೆಹಚ್ಚಿದ ಅರಣ್ಯ ಇಲಾಖಾಧಿಕಾರಿಗಳು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಗೋಪಾಲ ಪೂಜಾರಿ ಬಂಧಿತ ಆರೋಪಿ. ಖಚಿತ ವರ್ತಮಾನದ ಮೇರೆಗೆ ಉಪವಲಯ ಅರಣ್ಯಾಧಿಕಾರಿ ಎಚ್.ಬಿ. ರಮೇಶ್ ಮತ್ತವರ ತಂಡ ಗಾಣದಪಡ್ಪು ಬಳಿ ಹೊಂಚು ಹಾಕಿ ಟೆಂಪೊ ವಶಪಡಿಸಿಕೊಂಡರು. ಆರೋಪಿ ಗೋಪಾಲ ಪೂಜಾರಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಟೆಂಪೊ ಸಹಿತ ಮರದ ದಿಮ್ಮಿಯ ಮೌಲ್ಯ ಸುಮಾರು ರು. 1.25 ಲಕ್ಷ ಎಂದು ಅಂದಾಜಿಸಲಾಗಿದೆ. ವಲಯ ಅರಣ್ಯಾಧಿಕಾರಿ ಎನ್. ಸುಬ್ರಹ್ಮಣ್ಯ ರಾವ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಅರಣ್ಯ ರಕ್ಷಕರಾದ ಲಕ್ಷ್ಮಿನಾರಾಯಣ, ಶಿವಲಿಂಗಸ್ವಾಮಿ, ವಿನಯ ಕುಮಾರ್, ಚಾಲಕ ಜಯಪ್ರಕಾಶ್, ಕಾಳಭೈರವ ಪಾಲ್ಗೊಂಡಿದ್ದರು. ಉಪ ಅರಣ್ಯಾಧಿಕಾರಿ ಪಾಲಯ್ಯ ಮುಂದಿನ ತನಿಖೆ ನಡೆಸುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement