ಇಂದಿನಿಂದ ಸಹಕಾರ ಸಪ್ತಾಹ
ಮಂಗಳೂರು: ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ವತಿಯಿಂದ 14 ರಿಂದ 20ರವರೆಗೆ ಜಿಲ್ಲೆಯ ವಿವಿಧೆಡೆ 60 ನೇ ವರ್ಷದ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ. ಮೂಡುಬಿದಿರೆಯ ಸಹಕಾರಿ ಸಂಘದ ಸಭಾಂಗಣದಲ್ಲಿ 14 ರಂದು ಸಹಕಾರಿ ಆಡಳಿತ, ನಾಯಕತ್ವ ಮತ್ತು ಸುಧಾರಣೆ ಎಂಬ ಕಾರ್ಯಾಗಾರ ನಡೆಯಲಿದೆ. 15 ರಂದು ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ, 16 ರಂದು ಕುಲಶೇಖರ ಹಾಲು ಉತ್ಪಾದಕರ ಒಕ್ಕೂಟದಲ್ಲಿ, 17 ರಂದು ಸುಳ್ಯ ಪಂಜ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಹಾಗೂ ಪುತ್ತೂರಿನ ಕುಂಬ್ರ ವ್ಯವಸಾಯ ಸೇವಾ ಸಂಘದಲ್ಲಿ 18 ರಂದು ಉತ್ತಮ ಜೀವನಕ್ಕಾಗಿ ಸಹಕಾರಿ ಗೃಹ ನಿರ್ಮಾಣ, 19 ರಂದು ಬೆಳ್ತಂಗಡಿ ಕೊಕ್ಕಡ ಸೇವಾ ಸಹಕಾರಿ ಸಂಘದ ವತಿಯಿಂದ ಸೌತಡ್ಕದಲ್ಲಿ ಸಹಕಾರ ಸಂಬಂಧಿ ತೆರಿಗೆ ಮತ್ತು ಕಾಯ್ದೆ ಮತ್ತು 20 ರಂದು ಬಂಟ್ವಾಳ ಇಡ್ಕಿದು ಸೇವಾ ಸಹಕಾರಿ ಸಂಘದ ವತಿಯಿಂದ ಸಹಕಾರ ಸಂಸ್ಕೃತಿ ಮತ್ತು ಮೌಲ್ಯಗಳ ಉತ್ತೇಜನ ಕುರಿತು ವಿಷಯ ಮಂಡನೆ ನಡೆದು ಸಮಾರೋಪಗೊಳ್ಳಲಿದೆ ಎಂದು ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಬಿ. ದಿವಾಕರ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಿಶ್ವರೂಪ ದರ್ಶನ
ಬೆಳ್ತಂಗಡಿ: ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ.14ರಂದು ಪ್ರಾತಃಕಾಲ 4.30ರಿಂದ 6 ಗಂಟೆವರೆಗೆ ಸಹಸ್ರಾರು ಹಣತೆ ದೀಪಗಳನ್ನು ಬೆಳಗಿಸಿ ದೇವರ 'ವಿಶ್ವರೂಪ ದರ್ಶನ' ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಹಣತೆ ದೀಪಗಳನ್ನು ಹಚ್ಚಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿವೇಕಾನಂದ ಪ್ರಭು ತಿಳಿಸಿದ್ದಾರೆ.