ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತೆರಿಗೆ ಸಂಗ್ರಹದಲ್ಲಿ ಅಕ್ರಮ: ತನಿಖೆ

Rashmi Kasaragodu
Updated On : 14 Nov 2013, 1:47 am

ವಿಟ್ಲ: ಅಂಗಡಿ ತೆರಿಗೆ ಸಂಗ್ರಹ ಪುಸ್ತಕದಲ್ಲಿ ಪಂಚಾಯಿತಿ ಸಿಬ್ಬಂದಿ ಅಕ್ರಮ ಎಸಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರದಿಂದ ಜಿಲ್ಲಾ ಪಂಚಾಯಿತಿಯ ಮೂವರು ಅಧಿಕಾರಿಗಳು ತೆರಿಗೆ ಬಿಲ್ ಪುಸ್ತಕಗಳ ತನಿಖೆಯಲ್ಲಿ ನಿರತರಾಗಿದ್ದಾರೆ.
ವಿಟ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲು ಜಿಲ್ಲಾ ಪಂಚಾಯಿತಿ ಬಿಲ್ ಪುಸ್ತಕ ಬಳಸಲಾಗುತ್ತದೆ. ಆದರೆ ಬಿಲ್  ಸಂಗ್ರಹಕಾರರು ಬಿಲ್ ಪುಸ್ತಕಗಳನ್ನು ಪಡೆದು ಕೆಲವೊಂದನ್ನು ಪಂಚಾಯಿತಿಗೆ ವಾಪಸ್ ನೀಡಿರಲ್ಲಿಲ್ಲ. ಈ ವಿಚಾರ ಸಾಮಾನ್ಯ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿ, ಅಧ್ಯಕ್ಷೆ ಭವಾನಿ ರೈ ಕೊಲ್ಯ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸದಾನಂದ ಆಚಾರ್, ವಿಜಯ ಲತಾ, ಸಬಿತಾ ಅವರನ್ನೊಳಗೊಂಡ ತಂಡ ಪಂಚಾಯಿತಿಯಲ್ಲಿ ಕಡತಗಳ ಪರಿಶೀಲನೆಗೆ ಆರಂಭಿಸಿದ್ದಾರೆ.


ಇಂದು ಸಚಿವ ರೈ ಜಿಲ್ಲಾ ಪ್ರವಾಸ



ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ನ. 14 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30ಕ್ಕೆ ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಉದ್ಘಾಟಿಸುವರು. ಮಧ್ಯಾಹ್ನ 3.30ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮಹಿಳಾ ಕ್ರೀಡಾಕೂಟ ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement