ಮುದ್ದು ಕಂದ ಸ್ಪರ್ಧೆ: ತನ್ವಿ, ಸಾನ್ವಿತ, ಉಜ್ವಲ್‌ಗೆ ಬಹುಮಾನ
ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಬಂಟ್ವಾಳ ವಲಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಮುದ್ದುಕಂದ ಸ್ಪರ್ಧೆಯ ಪ್ರಥಮ ಬಹುಮಾನವನ್ನು ತನ್ವಿ ಶೆಟ್ಟಿ ಸಜೀಪ, ದ್ವಿತೀಯ ಬಹುಮಾನ ಸಾನ್ವಿತ ಎಸ್.ಬಂಗೇರ ಮತ್ತು ತೃತೀಯ ಬಹುಮಾನ ಉಜ್ವಲ್ ಅಮೀನ್ ಬಂಟ್ವಾಳ ಪಡೆದಿದ್ದಾರೆ. ಬಹುಮಾನ ಗಳಿಸಿದ ಮಕ್ಕಳಿಗೆ ಡಿ. 9ರಂದು 6 ಗಂಟೆಗೆ ರೋಟರಿ ಬಾಲಭವನದಲ್ಲಿ ನಡೆಯುವ ಎಸ್‌ಕೆಪಿಎ ಬಂಟ್ವಾಳ ವಲಯದ ಪದಗ್ರಹಣ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಆನಂದ ತಿಳಿಸಿದ್ದಾರೆ.