ರೈಲು ಸಂಚಾರ ವ್ಯತ್ಯಯ
ಮಂಗಳೂರು: ತಿರುವನಂತಪುರಂನಲ್ಲಿ ಧಾರಾಕಾರ ಮಳೆಯಿಂದ ರೇಲ್ವೆ ಹಳಿ ಮೇಲೆ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದ್ದು, ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರವನ್ನು ಬುಧವಾರ ಭಾಗಶಃ ರದ್ದುಪಡಿಸಲಾಗಿದೆ.
ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್ಪ್ರೆಸ್ ವರ್ಕಳದಿಂದ ರದ್ದುಗೊಳಿಸಲಾಗಿದೆ. ಈ ರೈಲು ಕೊಲ್ಲಂನಿಂದ ಮಂಗಳೂರು ಸೆಂಟ್ರಲ್ಗೆ ಸಂಚರಿಸುತ್ತದೆ. ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್ಪ್ರೆಸ್ ರೈಲು ಕೊಲ್ಲಂ ಜಂಕ್ಷನ್ ಮತ್ತು ತಿರುವನಂತಪುರಂ ಮಧ್ಯೆ ಸಂಚಾರ ಸ್ಥಗಿತಗೊಳಿಸಿದೆ.
ಈ ರೈಲು ಕೊಲ್ಲಂ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸಲಿದೆ. ಮಂಗಳೂರು ಸೆಂಟ್ರಲ್-ನಾಗರಕೊಯಿಲ್ ಜಂಕ್ಷನ್ ಪರಶುರಾಮ ಎಕ್ಸ್ಪ್ರೆಸ್ ರೈಲು ತ್ರಿಶೂರ್ನಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ರೈಲು ನಾಗರಕೊಯಿಲ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಮಧ್ಯೆ ಸಂಚರಿಸಲಿದೆ. ತ್ರಿಶೂರ್-ತಿರುವನಂತಪುರಂ ಮಧ್ಯೆ ಸಂಚಾರ ಇರುವುದಿಲ್ಲ ಎಂದು ಪಾಲ್ಘಾಟ್ ರೈಲ್ವೆ ವಿಭಾಗ ಪ್ರಕಟಣೆ ತಿಳಿಸಿದೆ.