ಇಂದಿನಿಂದ ಚಿತ್ರಕಲಾ ಪ್ರದರ್ಶನ
ಮಂಗಳೂರು: ಕೇರಳ ಸಮಾಜಂ ವತಿಯಿಂದ ಉಲ್ಲಾಸ್ ಬಾಬು ಮತ್ತು ಸಬೀನಾ ದಂಪತಿ ರಚಿಸಿದ ಚಿತ್ರಕಲಾ ಪ್ರದರ್ಶನ ನ.15ರಿಂದ 17ರ ವರೆಗೆ ನಗರದ ಲೇಡಿಸ್ ಕ್ಲಬ್ನಲ್ಲಿ ನಡೆಯಲಿದೆ. ಬೆಳಗ್ಗೆ 10ಕ್ಕೆ ಶಾಸಕ ಜೆ.ಆರ್.ಲೋಬೋ ಉದ್ಘಾಟಿಸುವರು ಎಂದು ಕಾರ್ಯದರ್ಶಿ ಅಜಿತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.