ಉಡುಪಿ: 23, 24ರಂದು ಕ್ರಿಕೆಟ್ ಪಂದ್ಯಾಟ
ಉಡುಪಿ: ಸೈಮಂಡ್ಸ್ ಕ್ರಿಕೆಟರ್ಸ್ ಕಡಿಯಾಳಿ ಆಶ್ರಯದಲ್ಲಿ 23 ಹಾಗೂ 24ರಂದು ಉಡುಪಿಯ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಸೈಮಂಡ್ಸ್ ಟ್ರೋಫಿ-2013 ಕ್ರಿಕೆಟ್ ಪಂದ್ಯಕೂಟ ನಡೆಯಲಿದೆ.
ವಿಜೇತರಿಗೆ ಪ್ರಥಮ ಬಹುಮಾನ ರು. 15,555 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ರು. 7777 ಹಾಗೂ ಶಾಶ್ವತ ಫಲಕ, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ದಾಂಡಿಗ ಹಾಗೂ ಉತ್ತಮ ಎಸೆತಗಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ತಂಡಗಳು ನ.21ರ ಒಳಗಾಗಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ: 9901850385, 7411817301.
ಇಂದು ಸ್ನೇಹ ಸಂವಾದ
ಮಂಗಳೂರು: ಯುನಿವರ್ಸಲ್ ವೆಲ್ಫೇರ್ ಫೋರಂ(ಯುನಿವೆಫ್) ಕರ್ನಾಟಕ ವತಿಯಿಂದ ಕುರಾನ್ ಪರಿಚಯ ಅಭಿಯಾನದ ಸಮಾರೋಪ ನ.15ರಂದು ಬಲ್ಮಠ ಶಾಂತಿ ನಿಲಯದಲ್ಲಿ ಸ್ನೇಹ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯಾಧ್ಯಕ್ಷ ಅಫೀಉದ್ದೀನ್ ಕುದ್ರೋಳಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 6.15ಕ್ಕೆ 'ದೇವರು, ಧರ್ಮ ಮತ್ತು ನಾವು' ವಿಷಯದಲ್ಲಿ ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಸಂತ ಅಲೋಶಿಯಸ್ ಪಿಯು ಕಾಲೇಜು ಪ್ರಾಂಶುಪಾಲ ಫಾ.ಎಲ್ವಿನ್ ಸೂಯಿಸ್ ಎಸ್ಜೆ, ಉಡುಪಿ ಸರ್ಕಾರಿ ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ವಿಚಾರ ಮಂಡಿಸುವರು. ಈ ಸಂದರ್ಭ ಅಕ್ಷರ ಸಂತ ಹರೇಕಳ ಹಾಜಬ್ಬಗೆ ಸೇಖ್ ಅಹ್ಮದ್ ಸರ್ಹಿಂದಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದರು.