ಉರುಳಿಗೆ ಸಿಕ್ಕ ಚಿರತೆ ರಕ್ಷಣೆ
ಹೆಬ್ರಿ: ಮುದ್ರಾಡಿ ಬಳಿಯ ಜಕ್ಕನಾಡಿ ಎಂಬಲ್ಲಿ ಗುರುವಾರ ಮುಂಜಾನೆ ಕಾಡುಹಂದಿಗೆ ಇಟ್ಟ ಉರುಳಿಗೆ ಚಿರತೆ ಸಿಕ್ಕಿದ್ದು ಕಂಡುಬಂದಿದ್ದು ಬಳಿಕ ಅದನ್ನು ರಕ್ಷಿಸಿ ಅಭಯಾರಣ್ಯಕ್ಕೆ ಬಿಡಲಾಯಿತು.
ಉರುಳಿನಲ್ಲಿ ಚಿರತೆಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಇಲಾಖೆಯ ಸಿಂಬ್ಬಂದಿ ಬಲೆ ಹಾಕಿ ಚಿರತೆಯನ್ನು ಹಿಡಿಯಲು ಪ್ರಯತ್ನಿಸಿದಾಗ ಅದು ವಿಫಲವಾದಾಗ, ಪಿಲಿಕುಳದ ಅರಿವಳಿಕೆ ತಜ್ಞರುಬಂದು ಚಿರತೆಗೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಉರುಳಿನಿಂದ ತಪ್ಪಿಸಿ ಚಿರತೆಯನ್ನು ಆಗುಂಬೆ ಆಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಇದು ಎಂಟು ವರ್ಷದ ಗಂಡು ಚಿರತೆಯಾಗಿದ್ದು ಅರೋಗ್ಯವಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದರು. ಅರಣ್ಯಾಧಿಕಾರಿಗಳಾದ ಡಿಎಫ್ಒ ರವಿಶಂಕರ್, ಎಸಿಎಫ್ ಕಿಶೋರ್ ಕುಮಾರ್, ವಲಯಾರಣ್ಯಧಿಕಾರಿಗಳಾದ ಸತೀಶ್ ಆಚಾರ್ಯ, ಸುಬ್ರಮಣ್ಯ ಭಟ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.