ಪೊಲೀಸ್ ಪೇದೆ ಹತ್ಯೆ; ಸಂಘ ಖಂಡನೆ
ಉಡುಪಿ: ಅಕ್ರಮ ದಂಧೆ ನಡೆಸುತ್ತಿರುವ ಲಾರಿ ಪರಿಶೀಲನೆಗೆ ನ. 12ರಂದು ಹೋಗಿದ್ದ ಪೊಲೀಸ್ ಪೇದೆಯ ಹತ್ಯೆಯನ್ನು ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ ಖಂಡಿಸಿದ್ದಾರೆ.
ಕರ್ತವ್ಯನಿರತ ಕೋಲಾರ ಪೊಲೀಸ್ ಠಾಣೆಯ ಪೇದೆ ಶಿವಕುಮಾರ್ ಮೇಲೆ ಲಾರಿ ಹರಿಸಿ ಕೊಲೆ ಮಾಡಿರುವವರನ್ನು ಬಂಧಿಸಿ ಶಿಕ್ಷೆಗೊಳಪಡಿಸುವಂತೆ, ಪೇದೆಯ ಕುಟುಂಬದವರಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡುವಂತೆ ತೋನ್ಸೆ ಒತ್ತಾಯಿಸಿದ್ದಾರೆ.