ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೀನುಗಾರರ ಅಭಿವೃದ್ಧಿಗೆ ಪ್ರಥಮ ಆದ್ಯತೆ: ವಿನಯ ಕುಮಾರ್ ಸೊರಕೆ

Rashmi Kasaragodu
Updated On : 16 Nov 2013, 1:57 am

ಮಂಗಳೂರು: 'ಮೀನುಗಾರರು ಜೀವನ್ಮರಣದ ಮಧ್ಯೆ ಕೆಲಸ ಮಾಡುತ್ತಿದ್ದು, ಮೀನುಗಾರಿಕೆಗೆ ಪ್ರಥಮ ಆದ್ಯತೆ ನೀಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ' ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಗುರುವಾರ ನಗರದ ಮೀನುಗಾರಿಕಾ ಹಳೆ ಬಂದರಿನಲ್ಲಿ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮೀನುಗಾರಿಕೆ ಕರಾವಳಿ ಪ್ರದೇಶದ ಎಲ್ಲ ಬಂದರುಗಳು ವಾಣಿಜ್ಯ ಕ್ಷೇತ್ರವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಾದ ನಂತರ ಬಂದರುಗಳು ನಿಷ್ಕ್ರೀಯವಾಗಿದೆ. ಇದರ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಮೀಸಲಿಟ್ಟಿದ್ದು, ಚಿತ್ರಾಪುರ ಕುಳಾಯಿಯಲ್ಲಿ ಬಂದರು ನಿರ್ಮಾಣಕ್ಕಾಗಿ ರು. 165 ಕೋಟಿ ಮೀಸಲಿಟ್ಟಿದೆ ಎಂದರು.
ಹೆಜಮಾಡಿ ಬಂದರು ನಿರ್ಮಾಣಕ್ಕೆ ರು. 100 ಕೋಟಿ ಮೀಸಲಿರಿಸಲಾಗಿದೆ. ನಾಡದೋಣಿಗೆ ಮಾತ್ರ ಸೀಮಿತವಾಗಿ ಮರವಂತೆ ಬಂದರಿನಲ್ಲಿ ಕೇರಳ ಪದ್ಧತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಡೇರಿ ಬಂದರಿನಲ್ಲಿ ಡ್ರಜ್ಜಿಂಗ್ ಮಿಶನ್ ತರಲಾಗಿದೆ. ಶಿರೂರು ಬಂದರನ್ನೂ ಅಭಿವೃದ್ಧಿಪಡಿಸಲಾಗುವುದು ಎಂದರು.
ಮೀನುಗಾರರ ವೃತ್ತಿ ಉಳಿಸಲು, ಅವರಿಗೆ ಆಧಾರವಾಗುವಂತೆ ರು. 60 ಸಾವಿರ ಸಾಲವನ್ನು ರು. 1.20 ಸಾವಿರಕ್ಕೆ ಸಾಲಸೌಲಭ್ಯ ಏರಿಸಲಾಗಿದೆ. ಎಡಿಬಿ ಯೋಜನೆಯಲ್ಲಿ ಕರಾವಳಿ ತೀರದ ಸಮುದ್ರ ಕೊರತೆ ತಡೆಯಲು ಸುಮಾರು ರು. 263 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
ಇದೇ ಸಂದರ್ಭ ಫೆಡರೇಶನ್ ಕಟ್ಟಡ ನಿರ್ಮಾಣದ ಎಂಜಿನಿಯರ್ ಅರುಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಬೋಟಿನ ಮಾಲಕರಿಗೆ ಚಿನ್ನದ ನಾಣ್ಯ ಹಾಗೂ ವಿವಿಧ ಮೀನುಗಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಿಸಲಾಯಿತು.
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೋ, ಕಾಪು ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಡಿ. ಪ್ರಸಾದ್, ಸಹಕಾರಿ ಸಂಘಗಳ ಉಪನಿಬಂಧಕ ವಿಜಯ್ ಕುಮಾರ್, ಜಿಲ್ಲಾ ಮೊಗವೀರ ಮಹಾಜನ ಸಂಘ ಮಹಿಳಾ ಘಟಕ ಮಾಜಿ ಅಧ್ಯಕ್ಷೆ ಸೀತಮ್ಮ ಟೀಚರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಕವಿತಾ ವಾಸು, ರತಿಕಲಾ, ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement