ಇಂದು ಕೊಂಕಣ ಮಾರ್ಗದಲ್ಲಿ ಎರ್ನಾಕುಲಂ- ಮುಂಬೈ ರೈಲು
ಮಂಗಳೂರು: ಜನದಟ್ಟಣೆ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಎರ್ನಾಕುಲಂ-ಲೋಕಮಾನ್ಯ ತಿಲಕ್ ಟರ್ಮಿನ್ಸ್ ಮಧ್ಯೆ ವಿಶೇಷ ರೈಲು ಸಂಚಾರವನ್ನು ನ.17ರಂದು ಏರ್ಪಡಿಸಿದೆ.
ಈ ವಿಶೇಷ ರೈಲು ನ.17ರಂದು ಮಧ್ಯಾಹ್ನ 1.55ಕ್ಕೆ ಎರ್ನಾಕುಲಂ ಜಂಕ್ಷನ್ನಿಂದ ಹೊರಟು ಲೋಕಮಾನ್ಯ ಟರ್ಮಿನ್ಸ್ಗೆ ನ.18ರಂದು ಸಂಜೆ 4ಕ್ಕೆ ತಲುಪಲಿದೆ. ಈ ರೈಲು ಎಸ್ 2- ಟೈರ್, ಎಸ್ 3-ಟೈರ್, 13 ಸ್ಲೀಪರ್ ಕ್ಲಾಸ್, 6 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ಗಳಿವೆ. ಈ ರೈಲಿಗೆ ಅಲುವಾ, ತ್ರಿಶೂರ್, ಶೋರ್ನೂರ್, ಕುಟ್ಟಿಪುರಂ, ತಿರೂರ್, ಕೋಯಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು, ಕಾಞಂಗಾಡ್, ಕಾಸರಗೋಡು, ಮಂಗಳೂರು ಜಂಕ್ಷನ್, ಉಡುಪಿ, ಕಾರವಾರ, ಮಡ್ಗಾಂವ್, ಥಿವಿಮ್, ಕಂಕವಾಲಿ, ರತ್ನಗಿರಿ, ಚಿಪ್ಲೂನ್, ರೋಹಾ, ಥಾಣೆಯಲ್ಲಿ ನಿಲುಗಡೆ ಕಲ್ಪಿಸಲಾಗಿದೆ ಎಂದು ಫಾಲ್ಘಾಟ್ ರೇಲ್ವೆ ವಿಭಾಗ ಪ್ರಕಟಣೆ ತಿಳಿಸಿದೆ.