ವಿಶೇಷ ಒಲಿಂಪಿಕ್ಸ್ ಕ್ರೀಡಾಳುಗಳಿಗೆ ಸಹಾಯ ಮಾಡಿ
ಮಂಗಳೂರು: ಸಂತ ಆಗ್ನೇಸ್ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳಾದ, ಅಂತಾರಾಷ್ಟ್ರೀಯ ಕ್ರೀಡಾಪಟು ಡ್ಯಾನನ್ ಸಲ್ಡಾನ, ಮೈಹಿದ್ದೀನ್ ತಾಜ್‌ಮನ್ ಇವರು ನ. 26 ರಿಂದ ಡಿ. 8ರ ತನಕ ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶೇಷ ಒಲಿಂಪಿಕ್ಸ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಭಾರತವನ್ನು ಪ್ರತಿನಿಧಿಸುವರು. ಕರ್ನಾಟಕದಿಂದ ಈ ಇಬ್ಬರು ವಿದ್ಯಾರ್ಥಿಗಳು ಆಯ್ಕೆಗೊಂಡಿರುತ್ತಾರೆ. ಇವರು ಈಗಾಗಲೇ ಐಲ್ಯಾಂಡ್, ಗ್ರೀಸ್, ಚೀನಾ ದೇಶಗಳಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿದ್ದಾರೆ. ಆಗ ಕ್ರೀಡಾ ಸಂಸ್ಥೆಗಳು ಮಕ್ಕಳನ್ನು ತಮ್ಮ ಖರ್ಚಿನಲ್ಲಿ ವಿದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಒಲಿಂಪಿಕ್ಸ್ ಸಂಸ್ಥೆ ಖರ್ಚುವೆಚ್ಚ ಶಾಲೆಗೆ ವಹಿಸಿದ್ದು, ಆರ್ಥಿಕ ಸಹಾಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ಆಗ್ನೆಸ್ ಶಾಲೆಯ ಪ್ರಾಂಶುಪಾಲೆ ಮರಿಯಾ ಶ್ರುತಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ರೀಡಾಪಟುಗಳ ಆರ್ಥಿಕ ಸಹಾಯಕ್ಕೆ ಸರ್ಕಾರದ ಬಳಿ ಅಂಗಲಾಚಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಪ್ರತಿಯೊಬ್ಬರಿಗೆ ತಲಾ ರು. 1 ಲಕ್ಷ ವೆಚ್ಚವಾಗಲಿದ್ದು, ಸಂಘ ಸಂಸ್ಥೆಗಳು, ಗಣ್ಯ ವ್ಯಕ್ತಿಗಳು ಸಹಾಯ ಮಾಡಿದರೆ ಉತ್ತಮ. ಸಿಂಡಿಕೇಟ್ ಬ್ಯಾಂಕ್, ಅಕೌಂಟ್ ಸಂಖ್ಯೆ- 02442200012385, ್ಝಜ್ಛಿ ಃಕ. ಖಘಃಇಕಕಕಕ244 ಖಾತೆಗೆ ಜಮಾ ಮಾಡಬಹುದು ಎಂದು ದೈಹಿಕ ಶಿಕ್ಷಕ ನಾರಾಯಣ ಶೇರಿಗಾರ್ ಹೇಳಿದ್ದಾರೆ.
ಗೋಷ್ಠಿಯಲ್ಲಿ ಸಿಸ್ಟರ್ ಕ್ರೀಡಾಪಟುಗಳಾದ ಡ್ಯಾನನ್ ಸಲ್ಡಾನ್, ಮೈಹಿದ್ದೀನ್ ತಾಜ್‌ಮನ್ ಇದ್ದರು.