ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗಂಡಾನೆ ಕಳೇಬರ ಪತ್ತೆ

Mainashree
Updated On : 18 Nov 2013, 11:59 am

ಉಪ್ಪಿನಂಗಡಿ: ಉಪ್ಪಿನಂಗಡಿ- ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯ ಗಡಿಭಾಗದ ಗಡಿತೋಡು ಎಂಬಲ್ಲಿ ಗಂಡಾನೆಯ ಕಳೇಬರ ಪತ್ತೆಯಾಗಿರುವ ಬಗ್ಗೆ ಉಭಯ ವಲಯ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದು, ಮೃತ ಆನೆಯ ವಯಸ್ಸು 8 ರಿಂದ ಹತ್ತು ವರ್ಷ ವಯೋವಾನವಾಗಿರಬಹುದೆಂದು ಅಂದಾಜಿಸಲಾಗಿದೆ.
ಆನೆಯ ಮೃತದೇಹ ಪತ್ತೆಯಾದ ಪ್ರದೇಶ ಯಾರ ವ್ಯಾಪ್ತಿಗೆ ಸೇರಿದ್ದಾಗಿದೆ ಎಂಬ ಬಗ್ಗೆ ಗೊಂದಲ ಮೂಡಿದ್ದು, ಬಳಿಕ ಅದು ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿ ಹಾಗೂ ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯ ಮದ್ಯದಲ್ಲೇ ಇರುವುದರಿಂದ ಉಪ್ಪಿನಂಗಡಿ ಮತ್ತು ಸಕಲೇಶಪುರ ವಲಯ ಅರಣ್ಯ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮರಣೋತ್ತರ ಕಾರ್ಯಗಳನ್ನು ನೆರವೇರಿಸಲಾಯಿತು.
ಆನೆಗಳ ನಡುವೆ ಪರಸ್ಪರ ಕಾದಾಟದಿಂದಾಗಿ ಎದುರಾಳಿ ಆನೆಯ ದಂತ ಈ ಆನೆಯ ಹೊಟ್ಟೆಗೆ ತಿವಿದು ಉಂಟಾದ ಗಾಯದಿಂದಾಗಿ ಆನೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದ ಹೇಳಲಾಗಿದೆ. ಆನೆ ಅಸುನೀಗಿ ಕನಿಷ್ಠ ಹತ್ತು ದಿನಗಳಾಗಿರುವ ಸಾಧ್ಯತೆ ಕಂಡು ಬಂದಿದೆ. ಸ್ಥಳದಲ್ಲಿ ಅರಣ್ಯ ಇಲಾಖಾಧಿಕಾರಿಗಳಾದ ಗೋಪಾಲಯ್ಯ, ಅಬ್ಬಾಸ್, ಹರ್ಷ, ವೈದ್ಯಾಧಿಕಾರಿ ಪ್ರಕಾಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement