ಪುತ್ತೂರು: ಆರು ಮಂದಿ ಗ್ರಾಮಕರಣಿಕರಿಗೆ ಬಡ್ತಿ, ವರ್ಗ
ಪುತ್ತೂರು: ಪುತ್ತೂರು ತಾಲೂಕಿನ ಕಂದಾಯ ಇಲಾಖೆಯ 6 ಗ್ರಾಮಕರಣಿಕರನ್ನು ಸರ್ಕಾರ ಬಡ್ತಿಯೊಂದಿಗೆ ವರ್ಗಾವಣೆ ಮಾಡಿದೆ.
ಗ್ರಾಮಕರಣಿಕರಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ನಾರಾಯಣ ಅವರನ್ನು ಕಡಬ ಕಂದಾಯ ನಿರೀಕ್ಷಕರಾಗಿ, ಕೆಯ್ಯೂರು ಗ್ರಾಮದ ಸುಂದರ ನಾಯ್ಕ ಅವರನ್ನು ವೇಣೂರು ಕಂದಾಯ ನಿರೀಕ್ಷಕರಾಗಿ, ಮಾಡ್ನೂರು ಗ್ರಾಮದ ರವಿಕುಮಾರ್ ಅವರನ್ನು ಬೆಳ್ತಂಗಡಿ ಕಂದಾಯ ನಿರೀಕ್ಷಕರಾಗಿ, ಬನ್ನೂರು ಗ್ರಾಮದ ವಿಜಯ ವಿಕ್ರಮ ಅವರನ್ನು ಕೊಕ್ಕಡ ಕಂದಾಯ ನಿರೀಕ್ಷಕರಾಗಿ, ನಿಡ್ಪಳ್ಳಿ ಗ್ರಾಮದ ಜಗನ್ನಾಥ್ ರೈ ಮತ್ತು ನೆಲ್ಯಾಡಿಯ ಅಶೋಕ್ ರೈ ಅವರನ್ನು ಪುತ್ತೂರು ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿ ವರ್ಗಾಯಿಸಲಾಗಿದೆ.
ಚುನಾವಣಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ನಾಗೇಶ್ ಅವರನ್ನು ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿಗೊಳಿಸಿ ಅದೇ ಕಚೇರಿಯಲ್ಲಿ ಮುಂದುವರಿಸಲಾಗಿದೆ.