ಸೌದಿಯಲ್ಲಿ ಮುಕ್ಕ ಆರೋಪಿಗೆ ಗಲ್ಲು
ಮಂಗಳೂರು: ಸೌದಿಯಲ್ಲಿ ಹೆದ್ದಾರಿ ದರೋಡೆ ಆರೋಪಿ, ಮಂಗಳೂರಿನ ಮುಕ್ಕ ನಿವಾಸಿ ಇಸ್ಮಾಯಿಲ್ ಯಾನೆ ಆರಿಫ್ (30) ಎಂಬಾತನಿಗೆ ಸೌದಿ ನ್ಯಾಯಾಲಯ ಕೊಲೆ ಮತ್ತು ದರೋಡೆ ನಡೆಸಿದ ಅಪರಾಧಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿದ ಬಗ್ಗೆ ವರದಿಯಾಗಿದೆ. ಮೂಲತಃ ಇಲ್ಲಿನ ಮುಕ್ಕ ನಿವಾಸಿಯಾದ ಆರಿಫ್ 5 ವರ್ಷ ಹಿಂದೆ ತೀರ್ಥಹಳ್ಳಿಯಲ್ಲಿ ಕಾರನ್ನು ಬಾಡಿಗೆಗೆ ಗೊತ್ತುಪಡಿಸಿ ಮಂಗಳೂರಿಗೆ ಬಂದ ಬಳಿಕ ಚಾಲಕನನ್ನು ಕೊಲೆ ಮಾಡಿದ್ದ.
ನಂತರ ಜಿಲ್ಲಾ ಅಪರಾಧಪತ್ತೆ ದಳ ಪೊಲೀಸರಿಗೆ ಸೆರೆಯಾಗಿದ್ದ. ಆದರೆ ಎಸ್ಕಾರ್ಟ್ ವೇಳೆ ತಪ್ಪಿಸಿಕೊಂಡು ಸೌದಿಗೆ ಪರಾರಿಯಾಗಿದ್ದ. ಅಲ್ಲಿಂದ ದಮಾಮ್ನಲ್ಲಿ ವಾಸವಾಗಿದ್ದ. ಅಲ್ಲಿಯೂ ವೃದ್ಧನ ಮನೆ ದರೋಡೆ ಮಾಡಿ ಕೊಲೆ ಮಾಡಿದ್ದ. ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಲ್ಲಿನ ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ತಿಳಿದುಬಂದಿದೆ.